ನಿರ್ದೇಶಕ ಎಪಿ ಅರ್ಜುನ್ ಗೆ ಜಯ

ಬಹು ನಿರೀಕ್ಷಿತ ಮಾರ್ಟಿನ್ ಚಿತ್ರದ ಪ್ರಚಾರದಲ್ಲಿ ನಿರ್ದೇಶಕ ಅರ್ಜುನ್ ಹೆಸರು‌ ಕೈಬಿಟ್ಟು ಪ್ರಚಾರ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಎಂ ಜಿ ಉಮಾರ ಅವರನ್ನೊಳಗೊಂಡ ರಜಕಾಲದ ವಿಭಾಗೀಯ ಫೀಠ ಶುಕ್ರವಾರ ಆದೇಶ ನೀಡಿದೆ.

ಧ್ರುವ ಸರ್ಜಾ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಅಕ್ಡೋಬರ್ 11ರಂದು ಬಿಡುಗಡೆ ಆಗುತ್ತಿದೆ. ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರ ಎಂಬ ಟೈಟಲ್ ಕಾರ್ಡ್ ನಲ್ಲಿ ಅರ್ಜುನ್ ಹೆಸರು ತೆಗೆದು ಪ್ರಚಾರ ನಡೆಸಲು ನಿರ್ಮಾಪಕರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರು ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಚಾರದಲ್ಲಿ ನಿರ್ದೇಶಕರ ಹೆಸರು ಇರಬೇಕು. ಅವರ ಹೆಸರನ್ನು ಕೈಬಿಡದಂತೆ ಹೈಕೋರ್ಟ್ ಆದೇಶ ನೀಡಿದೆ. ಚಿತ್ರದ ಪ್ರಚಾರ ವಿವಾದದಲ್ಲಿ ನಿರ್ದೇಶಕ ಎಪಿ ಅರ್ಜುನ್ ಅವರಿಗೆ ತಾತ್ಕಾಲಿಕ ಜಯ ಲಭಿಸಿದೆ.

ಸಿನಿಮಾ ಸಂಬಂಧಿಸಿದ ಒಪ್ಪಂದಗಳನ್ನು ನಿರ್ಮಾಪಕರು ಪಾಲಿಸಿಲ್ಲವೆಂದು ವಾದ ಮಂಡಿಸಿದ ಅರ್ಜುನ್ ಪರ ವಕೀಲರು ನಿರ್ದೇಶಕರ ಹೆಸರು ಕೈಬಿಟ್ಟು ಚಿತ್ರ ಬಿಡುಗಡೆ ಮಾಡದಂತೆ ನಿರ್ಬಂಧ ಕೋರಿಕೆ ಕೋರ್ಟ್ ಮೆಟ್ಟಿಲೇರಿದ್ದರು.

ಎ.ಪಿ.ಅರ್ಜುನ್ ಪರ ಹಿರಿಯ ವಕೀಲ ಉದಯ್ ಹೊಳ್ಳ, ಪ್ರಸನ್ನ ಕುಮಾರ್ ವಾದ ಮಂಡಿಸಿದ್ದು, ನಿರ್ಮಾಪಕ ಮೆ. ಉದಯ್ ಮೆಹ್ತಾ, ವಾಸವಿ ಎಂಟರ್ ಪ್ರೈಸಸ್ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

‘ಮಾರ್ಟಿನ್’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ‘ಮಾರ್ಟಿನ್’ ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಭಾರತೀಯನೊಬ್ಬ ಪಾಕಿಸ್ತಾನದ ಗಡಿ ದಾಟಿ ಅಲ್ಲಿಗೆ ಹೋದರೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ.

ಚಿತ್ರದಲ್ಲಿ ಧ್ರುವ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮೂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!