‘ಮಾರ್ಕ್​’ಗೆ ಟೈಟಲ್ ಸಂಕಷ್ಟ

ಕಿಚ್ಚ ಸುದೀಪ್ ಅವರ 47ನೇ ಚಿತ್ರವಾದ  ‘ಮಾರ್ಕ್’ ಟೈಟಲ್ ವಿವಾದ ಭುಗಿಲೆದ್ದಿದೆ.

ಗಾಗಲೇ ಸಿನಿಮಾದ  ಶೇ.60ರಷ್ಟು  ಶೂಟ್  ಪೂರ್ಣಗೊಂಡಿದೆ. ‘ಮಾರ್ಕ್’ ಸಿನಿಮಾ ಟೈಟಲ್ ಕರ್ನಾಟಕ ಫಿಲ್ಮ್  ಚೇಂಬರ್​ನಲ್ಲಿ ರಿಜಿಸ್ಟರ್ ಆಗಿದೆ. ಈ ಟೈಟಲ್ ನೋಂದಣಿ ಮಾಡಿಸಿದ್ದು ಕೆಆರ್​ಜಿ ಸ್ಟುಡಿಯೋದವರು.  ಸುದೀಪ್​ಗಾಗಿ ಶೀರ್ಷಿಕೆಯನ್ನು ಅವರು ಬಿಟ್ಟುಕೊಟ್ಟಿದ್ದರು. ಈಗ ಈ ಟೈಟಲ್ ‘ಸತ್ಯ ಜ್ಯೋತಿ ಫಿಲ್ಮ್ಸ್’ಗೆ ಹಸ್ತಾಂತರ ಆಗಿದೆ. ಇದೇ ಸಂಸ್ಥೆಯ ಜೊತೆ ಸುದೀಪ್ ‘ಮಾರ್ಕ್’ ಮಾಡುತ್ತಿದ್ದಾರೆ.

‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ಯಲ್ಲೂ ‘ಮಾರ್ಕ್’ ಟೈಟಲ್ ನೋಂದಣಿ ಆಗಿದೆ. ಈ ವರ್ಷದ ಮೇ 19ರಂದು ‘ಮಾರ್ಕ್’ ಹೆಸರಲ್ಲಿ ಟೈಟಲ್ ನೋಂದಣಿ ಆಗಿದೆ. ‘ಗೌರವ್ ಫಿಲ್ಮ್ಸ್’  ಸಂಸ್ಥೆ   ಟೈಟಲ್ ರಿಜಿಸ್ಟರ್ ಮಾಡಿಸಿದೆ.  ಈ ಟೈಟಲ್ ನಮ್ಮದು ಎಂದು ಗೌರವ್ ಫಿಲ್ಮ್ಸ್ ಹೇಳುತ್ತಿದೆ.

ಕೆಆರ್​ಜಿ ಅವರೇ  ‘ಮಾರ್ಕ್’ ಟೈಟಲ್​  ಮೊದಲು ನೋಂದಣಿ ಮಾಡಿಸಿರುವುದರಿಂದ ‘ಮಾರ್ಕ್​’ ಟೈಟಲ್ ಸುದೀಪ್​ಗೆ ಸಿಗೋ ಸಾಧ್ಯತೆ ದಟ್ಟವಾಗಿದೆ. ಈ ರೀತಿಯ ಟೈಟಲ್ ಗೊಂದಲ ಈ ಮೊದಲು ಕೂಡ ಭುಗಿಲೆದ್ದಿದ್ದವು.

ಕಿಚ್ಚ ಸುದೀಪ್ ಅವರು ಜುಲೈನಲ್ಲಿ ಈ ಸಿನಿಮಾ ಘೋಷಣೆ ಮಾಡಿದರು. ಡಿಸೆಂಬರ್​​ 25ರಂದು ಸಿನಿಮಾ ರಿಲೀಸ್ ಮಾಡುವ ಆಲೋಚನೆ ಸಿನಿಮಾತಂಡಕ್ಕೆ ಇದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!