‘ಮಾರ್ಕ್’ ಟೀಸರ್ ಬಿಡುಗಡೆ

ಕಿಚ್ಚ ಸುದೀಪ್  ಅಭಿನಯದ ‘ಮಾರ್ಕ್’ ಟೀಸರ್ ಬಿಡುಗಡೆ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಅಭಿಮಾನಿಗಳಲ್ಲಿ ಹರ್ಷ ಉಂಟು ಮಾಡಿದೆ.

73 ಸೆಕೆಂಡುಗಳ ಟೀಸರ್ ಆಕ್ಷನ್ ಹೊಂದಿದೆ. ಅಭಿಮಾನಿಗಳಿಗೆ ಚಿತ್ರ ಡಿಸೆಂಬರ್ 25ರಂದು ರಸದೌತಣ ಉಣಪಡಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಮ್ಯಾಕ್ಸ್ ಮೂಲಕ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯನ್  ಆಕ್ಷನ್ ಚಿತ್ರ ಮಾರ್ಕ್ ನೊಂದಿಗೆ ಮತ್ತೆ ದೊಡ್ಡ ಪರದೆಯ ಮೇಲೆ ಬಂದಿದ್ದಾರೆ.

ಮಾಸ್ ಲುಕ್ ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಗಳ ಹುಟ್ಟಡಗಿಸುವ ಕಥೆಯನ್ನು ‘ಮಾರ್ಕ್’ ಚಿತ್ರ ಹೊಂದಿದೆ. ಚಿತ್ರದಲ್ಲಿ ನವೀನ್ ಚಂದ್ರ, ದೀಪಶಿಖಾ, ಯೋಗಿ ಬಾಬು ಮತ್ತು ಗೋಪಾಲಕೃಷ್ಣ ದೇಶಪಾಂಡೆ  ಇದ್ದಾರೆ.

ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜನ್ ಮಾರ್ಕ್ ಚಿತ್ರ ನಿರ್ಮಿಸಿದ್ದಾರೆ.  ಚಿತ್ರ ಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್  ಸಂಗೀತ ನೀಡಿದ್ದಾರೆ.   ಚಿತ್ರ  ಡಿಸೆಂಬರ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಇದು ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!