ಚಿತ್ರ: ಮಾರ್ಕ್
ನಿರ್ದೇಶನ: ವಿಜಯ್ ಕಾರ್ತಿಕೇಯ
ನಿರ್ಮಾಣ: ಸೆಂದಿಲ್ ತ್ಯಾಗರಾಜನ್, ಅರುಣ್ ತ್ಯಾಗರಾಜನ್
ಕಲಾ ಬಳಗ: ಸುದೀಪ್, ಯೋಗಿ ಬಾಬು, ಗುರು ಸೋಮ ಸುಂದರಂ, ರೋಷಿಣಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಇತರರು
ರೇಟಿಂಗ್: 3.5
ರಾಜ್ಯದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಬೆನ್ನು ಹತ್ತುವ ಸಸ್ಪೆಂಡ್ ಪೊಲೀಸ್ ಅಧಿಕಾರಿಯ ಅಬ್ಬರದ ಕಥೆ ಈ ವಾರ ತೆರೆಗೆ ಬಂದಿರುವ ಮಾರ್ಕ್ ಚಿತ್ರದ ಒನ್ ಲೈನ್ ಸ್ಟೋರಿ.
ಚಿತ್ರದಲ್ಲಿ ಸಸ್ಪೆಂಡ್ ಪೊಲೀಸ್ ಅಧಿಕಾರಿ ಮಾರ್ಕ್ ಅಲಿಯಾಸ್ ಅಜೇಯ್ ಮಾರ್ಕಂಡೇಯ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. 18 ಮಕ್ಕಳು ರಾಜ್ಯದಲ್ಲಿ ನಿಗೂಢವಾಗಿ ಕಣ್ಮರೆಯಾದಾಗ ಅವರನ್ನು ಕಿಡ್ನಾಪ್ ಮಾಡಿದವರು ಎನ್ನುವ ಪ್ರಶ್ನೆ ಮೂಡಿದೆ. ಇದರ ಜೊತೆಗೆ ಸಾವಿರಾರು ಕೋಟಿ ರೂಪಾಯಿಯ ಡ್ರಗ್ಸ್ ಪತ್ತೆಯಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಮಾರ್ಕ್ ಹೇಗೆ ಬಗೆಹರಿಸುತ್ತಾನೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಕಳೆದ ವರ್ಷ ಬಿಡುಗಡೆಯಾದ ಮ್ಯಾಕ್ಸ್ ಚಿತ್ರದ ಜೊತೆಗೆ ಸಾಮ್ಯತೆ ಮಾರ್ಕ್ ನಲ್ಲಿದೆ. ಎರಡು ಚಿತ್ರಗಳಿಗೆ ಒಂದೇ ತಂಡ ಕೆಲಸ ಮಾಡಿರುವ ಕಾರಣ ಆ ರೀತಿ ಅನಿಸಿದರೆ ಅಚ್ಚರಿ ಏನಿಲ್ಲ. ಮೇಕಿಂಗ್ ವಿಷಯದಲ್ಲಿ ಎರಡು ಚಿತ್ರಗಳಲ್ಲಿ ಹೋಲಿಕೆ ಕಂಡುಬರುತ್ತದೆ. ಆದರೆ ಕಥೆ ವಿಷಯದಲ್ಲಿ ಭಿನ್ನತೆ ಇದೆ.
ವಿಜಯ್ ಕಾರ್ತಿಕೇಯ ಅವರು ಚಿತ್ರವನ್ನು ವೇಗವಾಗಿ ತೆಗೆದುಕೊಂಡು ಹೋಗಿದ್ದಾರೆ. ಸುದೀಪ್ ಅವರ ಮ್ಯಾಕ್ಸ್ ನಲ್ಲಿದ್ದ ಮಾಸ್ ಅವತಾರವನ್ನು ನಿರ್ದೇಶಕರು ಇಲ್ಲೂ ಮುಂದುವರೆಸಿಕೊಂಡು ಹೋಗಿದ್ದಾರೆ.
ಸುದೀಪ್ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಅಬ್ಬರಿಸಿದ್ದಾರೆ. ಅವರ ಹೇರ್ ಸ್ಟೈಲ್ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಸಾಕಷ್ಟು ಕಲಾವಿದರು ಕಾಣಿಸಿಕೊಂಡಿದ್ದಾರೆ. ಆದರೆ ಗಮನ ಸೆಳೆಯುವವರು ಕಡಿಮೆ.
ಚಿತ್ರವನ್ನು ತಾಂತ್ರಿಕವಾಗಿ ರಿಚ್ ಆಗಿ ನಿರ್ಮಿಸಲಾಗಿದೆ. ಬಹುತೇಕ ಚಿತ್ರದ ಕಥೆ ಕತ್ತಲಿನಲ್ಲಿ ನಡೆಯುತ್ತದೆ. ಛಾಯಾಗ್ರಹಕ ಶೇಖರ್ ಚಂದ್ರು ತಮ್ಮ ಕ್ಯಾಮರಾ ಕುಸುರಿಯಿಂದ ಚಿತ್ರದ ಅಂದವನ್ನು ಹೆಚ್ಚಿಸಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಗಮನ ಸೆಳೆಯುತ್ತದೆ.
ಸುದೀಪ್ ಅಭಿಮಾನಿಗಳಿಗೆ ಭರಪೂರ ಆಕ್ಷನ್ ಇರುವ ಚಿತ್ರ ಫ್ಯಾಮಿಲಿ ಪ್ರೇಕ್ಷಕರಿಗೂ ಓಕೆ ಅನಿಸುತ್ತದೆ.





Be the first to comment