ಕ್ರಿಸ್‌ಮಸ್ ಹಬ್ಬದ ದಿನ ತೆರೆಗೆ ಬಂದ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿವೆ.
ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಮೊದಲ ದಿನ 15.9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿಟಿವ್ ರಿವ್ಯೂಗಳು ಸಿನಿಮಾಗೆ ಬಲ ನೀಡಿವೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯೋಗಿ ಬಾಬು, ಗುರು ಸೋಮ ಸುಂದರಂ, ರೋಷಿಣಿ ಪ್ರಕಾಶ್, ಅರ್ಚನಾ ಕೊಟ್ಟಿಗೆ ಇತರರು ಅಭಿನಯ ಮಾಡಿದ್ದಾರೆ.
ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ‘45’ ಸಿನಿಮಾ ಮೊದಲ ದಿನ ಉತ್ತಮ ಓಕಲೆಕ್ಷನ್ ಮಾಡಿದೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ’45’ ಚಿತ್ರ 4.25 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಪ್ರೀಮಿಯರ್ ಶೋಗಳ ಲೆಕ್ಕ ಸೇರಿಸಿದರೆ 5 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ.
ಇಂದು ವಾರದ ದಿನವಾಗಿರುವುದರಿಂದ ಕಲೆಕ್ಷನ್ ಸ್ವಲ್ಪ ತಗ್ಗುವ ನಿರೀಕ್ಷೆ ಇದೆ. ಶನಿವಾರ, ಭಾನುವಾರ, ಹೊಸ ವರ್ಷದ ದಿನಗಳಲ್ಲಿ ಎರಡೂ ಸಿನಿಮಾಗಳು ಇನ್ನಷ್ಟು ಅಬ್ಬರಿಸುವ ಸಾಧ್ಯತೆ ಇದೆ.






Be the first to comment