ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಲೇ ಆರಂಭವಾದ ಉಘೇ ಉಘೇ ಮಾದೇಶ್ವರ ಈಗ ಜೀ ಕನ್ನಡವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲೊಂದಾಗಿದೆ. ಅದರಲ್ಲೂ ಭಕ್ತಿರಸಪ್ರಧಾನ ಕಥೆಯನ್ನು ಅತ್ಯಂತ ವೈಭವಯುತವಾಗಿ ನಿರೂಪಿಸುವಲ್ಲಿ ನಿರ್ಮಾಪಕ, ಪ್ರಧಾನ ನಿರ್ದೇಶಕ ಮಹೇಶ್ ಸುಖಧರೆ ಅವರ ಪಾತ್ರ ತುಂಬಾ ಪ್ರಮುಖವಾದುದು. ವಾರಾಂತ್ಯದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಾ ಜನರನ್ನು ಮಂತ್ರ ಮುಗ್ಧಗೊಳಿಸುತ್ತಿರುವ ಈ ಧಾರಾವಾಹಿಯ ಕಥೆ ಈಗ ಮತ್ತೊಂದು ಹೊಸ ತಿರುವು ಪಡೆಯುತ್ತಿದೆ. ಉಘೇ ಉಘೇ ಮಾದೇಶ್ವರ ಕಥೆಯಲ್ಲಿ ಬರುವ ಪ್ರಮುಖವಾದ ಘಟ್ಟ ಇದಾಗಿದ್ದು, ಬಾಲಕ ಮರಿದೇವ ಇನ್ನುಮುಂದೆ ದುಂಡುಮುಖದ ಅಂದಗಾರ ಮಾದಪ್ಪನಾಗಿ, ಮಾದೇಶ್ವರರಾಗಿ ಬೆಳೆದು ನಿಲ್ಲುವ ಪರ್ವಕಾಲ ಆರಂಭವಾಗಿದೆ. ಬರುವ ಮೇ 11ರ ಸಂಚಿಕೆಯಿಂದ ಬಾಲಕ ಮರಿದೇವ, ಮಾದೇಶ್ವರನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾನೆ. ಮಲೆ ಮಾದೇಶ್ವರನ ಇನ್ನೂ ಹಲವಾರು ಮಹಿಮೆಗಳನ್ನು ಮುಂದಿನ ಸಂಚಿಕೆಗಳಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುವ ಅವಕಾಶ ಲಭಿಸುತ್ತಿದೆ.
ಉತ್ತಮಾಪುರದ ಉತ್ತರಾಜಮ್ಮ, ಕಲ್ಯಾಣದೇವರ ದಂಪತಿಗಳಿಗೆ ಪವಾಡದ ಮೂಲಕ ಜನಿಸಿದ ಮರಿದೇವ (ಬಾಲ ಮಾದೇಶ್ವರ) ತನ್ನ ಏಳನೇ ವಯಸ್ಸಿಗೆ ಮನೆಬಿಟ್ಟು ಹೊರಡುವ ಮರಿದೇವ, ವಿವಿಧೆಡೆ ಸಂಚರಿಸುತ್ತ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುತ್ತಾನೆ. ಓಜಯ್ಯ ಎಂಬ ಗುರುವಿಗೆ ಪಾಠ ಕಲಿಸಿದ್ದಲ್ಲದೆ, ಸುತ್ತೂರು ಮಠದಲ್ಲಿ ಗುರುಗಳ ನೆಚ್ಚಿನ ಶಿಷ್ಯನಾಗಿ ರಾಗಿಕಲ್ಲಿನ ಪವಾಡ ಮೆರೆಯುತ್ತಾನೆ. ಅಲ್ಲಿಂದ ಕುಂತೂರಿಗೆ ಆಗಮಿಸಿ, ಅಲ್ಲಿ ಶ್ರೀಪ್ರಭುದೇವರ ಶಿಷ್ಯನಾಗಿ ಪವಾಡ ಮೆರೆಯುತ್ತ ದೈವಲೀಲೆಗಳನ್ನು ಪ್ರದರ್ಶಿಸುತ್ತ ದೊಡ್ಡವನಾಗುತ್ತಾನೆ. ಇನ್ನು ಮುಂದೆ ಬರುವ ಪ್ರಮುಖ ಘಟ್ಟವನ್ನು ತುಂಬಾ ಪರಿಣಾಮಕಾರಿಯಾಗಿ ಜನರನ್ನು ಮುಟ್ಟುವ ಹಾಗೆ ತೆಗೆದುಕೊಂಡು ಹೋಗಲಾಗಿದೆ. ಮಾದೇಶ್ವರರು ಕಾಣಿಸಿಕೊಳ್ಳುವುದು ದೈವೀಕತೆ ಮತ್ತು ವೈಭವಗಳ ಸಂಗಮವಾದ್ದರಿಂದ ಈ ದೃಶ್ಯಗಳನ್ನು ವಿಶೇಷ ಗ್ರಾಫಿಕ್ಸ್ ತಂತ್ರe್ಞÁನ ಬಳಸಿ ನಿರೂಪಿಸಲಾಗಿದೆ.
ಈವರೆಗೆ ಮರಿದೇವನ ಬಾಲ್ಯ, ಉತ್ತರಾಜಮ್ಮ, ಕಲ್ಯಾಣದೇವ, ಮಂಚಣ್ಣನ ಕಥೆಗಳ ಹದವಾದ ಹೂರಣ ವೀಕರಿಗೆ ಇಷ್ಟವಾಗುವಂತೆ ಉಣಬಡಿಸಿವೆ. ಈಗ ಮಾದೇಶ್ವರರ ಆಗಮನದಿಂದ ಇನ್ನೂ ಹೆಚ್ಚಿನ ವೀ ನಾವು ತಲುಪಲಿವೆ ಎಂಬ ವಿಶ್ವಾಸವನ್ನು ನಿರ್ದೇಶಕ ನವೀನ್ ಕೃಷ್ಣ ವ್ಯಕ್ತಪಡಿಸಿದ್ದಾರೆ.
ಮುಂದಿನ ಕಂತುಗಳಲ್ಲಿ ಲೋಕಕಲ್ಯಾಣಕ್ಕಾಗಿ ಪ್ರಪಂಚವನ್ನು ಸಂಚರಿಸುತ್ತ ಸಾಗುವ ಮಾದೇಶ್ವರರ ಮಹಿಮೆ, ಪವಾಡಗಳನ್ನು ಒಂದೊಂದಾಗಿ ನಿರೂಪಿಸುತ್ತಾ ಸಾಗುತ್ತದೆ. ಜಾನಪದ ಕಾವ್ಯದಲ್ಲಿ ದುಷ್ಟರನ್ನು ಶಿಕ್ಷಿಸಿ ಭಕ್ತರನ್ನು ರಕ್ಷಿಸುವ ಹಲವಾರು ಕಥೆಗಳಿದ್ದರೂ, ಇವುಗಳಲ್ಲಿ ಮುಖ್ಯವಾದವುಗಳನ್ನು ಆಯ್ದು ಕಾಲಾನುಕ್ರಮಣಿಕೆಯಲ್ಲಿ ಪೆಣಿಸಿ ವೀಕರ ಮುಂದೆ ತರುವುದು ನಿಜಕ್ಕೂ ದೊಡ್ಡ ಸವಾಲು ಎನ್ನುತ್ತಾರೆ ಚಿತ್ರಕಥೆಯ ಹೊಣೆಯನ್ನೂ ಹೊತ್ತಿರುವ ನಿರ್ಮಾಪಕ-ಪ್ರಧಾನ ನಿರ್ದೇಶಕ ಕೆ.ಮಹೇಶ್ ಸುಖಧರೆ.
ಕನ್ನಡ ಜಾನಪದ ಕಾವ್ಯ ಧಾರಾವಾಹಿಯಾಗಿ ಯಶಸ್ಸು ಕಂಡಿರುವುದು ನಮಗೆ ಹೆಮ್ಮೆ. ಉಘೇ ಉಘೇ ಮಾದೇಶ್ವರ ಈ ನಿಟ್ಟಿನಲ್ಲಿ ಒಂದು ಮೇಲ್ಪಂಕ್ತಿ. ಮುಂದೆ ಇಂಥ ಹಲವಾರು ಕಥೆಗಳನ್ನು ಕೈಗೆತ್ತಿಕೊಳ್ಳಲು ಸ್ಫೂರ್ತಿ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.
ಮಾದೇಶ್ವರರ ಪಾತ್ರದಲ್ಲಿ ನಟ ಆರ್ಯನ್ರಾಜ್ ಕಾಣಿಸಿಕೊಳ್ಳುತ್ತಿರೆ. ಇವರು ಪೌರಾಣಿಕ ಪಾತ್ರಗಳ ನಿರ್ವಹಣೆಯಲ್ಲಿ ಈಗಾಗಲೇ ಸೈ ಎನ್ನಿಸಿಕೊಂಡವರು. ಮರಿದೇವನ ಪಾತ್ರ ಮಾಡಿರುವ ಮಾ|ಅಮೋಘ ಈಗಾಗಲೇ ವೀಕರ ಮನ ಗೆದ್ದಿನೆ. ಆ ನಿರೀಕ್ಷೆಗೆ ತಕ್ಕಂತೆ ಪಾತ್ರ ನಿರ್ವಹಿಸುವುದೇ ಆರ್ಯನ್ರಾಜ್ ಅವರ ಮುಂದಿರುವ ಸವಾಲು.
Be the first to comment