ಚಿತ್ರ: ಮರೀಚಿ
ನಿರ್ದೇಶನ: ಸಿದ್ದೃವ್ ಸಿದ್ದು
ತಾರಾಗಣ: ವಿಜಯ ರಾಘವೇಂದ್ರ, ಸೋನು ಗೌಡ, ಶೃತಿ ಪಾಟೀಲ್, ಗೋಪಾಲಕೃಷ್ಣ ದೇಶಪಾಂಡೆ ಇತರರು
ರೇಟಿಂಗ್: 3.5/5
ವೈದ್ಯರ ಸರಣಿ ಕೊಲೆಯ ತನಿಖೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿ ಮರೀಚಿ ತೆರೆಯ ಮೇಲೆ ಮೂಡಿ ಬಂದಿದೆ.
ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರು ಭೈರವ್ ನಾಯಕ್ ಎನ್ನುವ ಪೊಲೀಸ್ ತನಿಖಾ ಅಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರ ಸರಣಿ ಕೊಲೆ ಯಾಕೆ ನಡೆಯುತ್ತದೆ? ಇದಕ್ಕೆ ಕಾರಣ ಏನು ಎನ್ನುವ ಸಸ್ಪೆನ್ಸ್ ಅಂಶವನ್ನು ವಿಜಯ ರಾಘವೇಂದ್ರ ಅವರು ಪ್ರೇಕ್ಷಕರ ಮುಂದೆ ತೆರೆದಿಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸರಣಿ ಕೊಲೆಗೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಸಿನಿಮಾವನ್ನು ನೋಡಬೇಕಿದೆ.
ತನಿಖಾ ಅಧಿಕಾರಿ ವಿಜಯ ರಾಘವೇಂದ್ರ ಅವರ ಪತ್ನಿಯಾಗಿ ಸೋನು ಗೌಡ ಅವರು ನಟಿಸಿದ್ದಾರೆ. ಶೃತಿ ಪಾಟೀಲ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರು ತಮ್ಮ ಪಾತ್ರದ ಮೂಲಕ ಸಿನಿಮಾಕ್ಕೆ ಟ್ವಿಸ್ಟ್ ನೀಡಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಕ್ಕೆ ಪೂರಕ ಎನ್ನುವಂತೆ ಜ್ಯೂಡ್ ಸ್ಯಾಂಡಿ ಅವರು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಮನೋಹರ ಜೋಶಿಯವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದೆ.
ಚಿತ್ರದ ಕಥೆಯಲ್ಲಿ ಕೆಲವೊಂದು ಕಡೆ ಲಾಜಿಕ್ ಮರೆಯಾಗುವುದು ಕಂಡು ಬರುತ್ತದೆ. ಆದರೂ ಮರ್ಡರ್ ಮಿಸ್ಟರಿ ಚಿತ್ರ ಇಷ್ಟಪಡುವವರಿಗೆ ಸಿನಿಮಾ ಓಕೆ ಅನಿಸುತ್ತದೆ.
____

Be the first to comment