ಮಾ.4ಕ್ಕೆ ಮೋಕ್ಷ ತೆರೆಗೆ

ಮೋಹನ್ ಧನರಾಜ್ ಹಾಗೂ ಆರಾಧ್ಯಾ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ಇರುವ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ ‘ಮೋಕ್ಷ’ ಮಾರ್ಚ್ 4ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಎಸ್.ಜಿ.ಎನ್. ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರದ ಬಿಡುಗಡೆಗೆ ನಿರ್ದೇಶಕ ಸಮರ್ಥ ಸಜ್ಜಾಗಿದ್ದಾರೆ. ಸಮರ್ಥ ನಾಯ್ಕ ಅವರು ಚಿತ್ರಕಥೆ, ನಿರ್ಮಾಣ ಮಾಡಿದ್ದಾರೆ. ಎಂಜಿನಿಯರ್ ಆಗಿ ನೌಕರಿ ಮಾಡುತ್ತಿದ್ದ ಅಂಕೋಲಾ ಮೂಲದ ಸಮರ್ಥ ನಾಯ್ಕ, ಜಾಹೀರಾತುಗಳ್ನು ಮಾಡಿದ ಅನುಭವ ಹೊಂದಿದ್ದಾರೆ.

ಚಿತ್ರವನ್ನು ಉತ್ತರ ಕನ್ನಡ, ಬೆಂಗಳೂರು, ಹಾಸನ ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಮೋಕ್ಷದಲ್ಲಿ ತಾರಕ್ ಪೊನ್ನಪ್ಪ ಹಾಗೂ ಪ್ರಶಾಂತ್ ಅವರ ಸಹ ನಟನೆ ಇದೆ. ಮಾಸ್ಕ್ ಮ್ಯಾನ್ ಈ ಸಿನಿಮಾದ ಮುಖ್ಯ ಆಕರ್ಷಣೆಯಾಗಿದೆ.

ಮೋಕ್ಷ’ ಥ್ರಿಲ್ಲರ್ ಸಿನಿಮಾ ಆಗಿದ್ದರೂ ಪ್ರೀತಿ, ಕೌಟುಂಬಿಕ ವಿಷಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಮುಖವಾಡ ಧರಿಸಿರುವ ವ್ಯಕ್ತಿಯೊಬ್ಬನ ಪಾತ್ರವಿದೆ. ಆತ ಯಾರು? ಆತನ ಉದ್ದೇಶವೇನು? ಆತ ಏಕೆ ಜನರಿಗೆ ತೊಂದರೆ ಕೊಡುತ್ತಿದ್ದಾನೆ ಇವು ಪ್ರೇಕ್ಷಕರಿಗೆ ಕುತೂಹಲ ಮೂಡಿಸುವ ಅಂಶಗಳಾಗಿವೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಇದಕ್ಕೆಲ್ಲ ಉತ್ತರ ಸಿಗುತ್ತದೆ ಎಂದು ವಿವರಿಸಿದ್ದಾರೆ ನಿರ್ದೇಶಕ ಸಮರ್ಥ ನಾಯಕ್.
ಜಯಂತ್ ಕಾಯ್ಕಿಣಿ, ಕುಮಾರದತ್ತ್ ಸಾಹಿತ್ಯ, ಕಿಶನ್ ಮೋಹನ್, ಸಚಿನ್ ಬಾಲು ಸಂಗೀತ ಇದೆ. ಎರಡು ಹಾಡುಗಳು ಸಿನಿಮಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಸಿನಿ ರಸಿಕರಿಗೆ ರೊಮ್ಯಾಂಟಿಕ್ ಅನುಭವ ನೀಡುತ್ತದೆ. ಟ್ರೈಲರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಮುಖವಾಡದ ವ್ಯಕ್ತಿ ಹಾಗೂ ನಾಯಕನ ನಡುವೆ ನಡೆಯುವ ದ್ವೇಷ, ಸೇಡಿನ ಕತೆಯನ್ನು ಸಿನಿಮಾ ಹೊಂದಿದೆ. ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನುವುದು ಚಿತ್ರ ಬಿಡುಗಡೆ ಬಳಿಕ ಗೊತ್ತಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!