ಬಹು ನಿರೀಕ್ಷಿತ ಚಿತ್ರ “ಒಂದು ಗಂಟೆಯ ಕಥೆ” ಇದೇ ತಿಂಗಳು ಮಾರ್ಚ್ 19 ರಂದು ಬಿಡುಗಡೆಗೆಯಾಗಲಿದೆ. ರಾಷ್ಟ್ರದಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತರುವ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳನ್ನು ಆಧರಿಸಿ ನಿರ್ಮಿಸಿರುವ ಈ ಚಿತ್ರವೂ ಸಂಪೂರ್ಣ ಹಾಸ್ಯಮಯವಾಗಿ ತೆರೆಗೆ ಬರುತ್ತಿದ್ದು, ಪ್ರೇಕ್ಷಕ ಪ್ರಭುಗಳಿಗೆ ಸಂಪೂರ್ಣ ಮನರಂಜನೆ ನೀಡುವ ಭರವಸೆ ನೀಡುತ್ತಾರೆ ಈ ಚಿತ್ರದ ನಿರ್ಮಾಪಕರಾದ ಕಶ್ಯಪ್ ದಾಕೋಜು, ಕೆ. ಎಸ್. ದುಶ್ಯಂತ್, ಶ್ವೇತ ದಾಕೋಜು ಹಾಗು ಇದರ ನಿರ್ದೇಶಕರಾದ ದ್ವಾರ್ಕಿ ರಾಘವರವರು. ಇದು ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ವತಿಯಿಂದ ತಯಾರಿಸಿರುವ ಮೂರನೇ ಚಿತ್ರವಾಗಿರುತ್ತದೆ.
ಇದು ಸಂಪೂರ್ಣ ಹೆಣ್ಣು ಮಕ್ಕಳ ಪರವಾದ ಚಿತ್ರವಾದರೂ, ಗಂಡು ಮಕ್ಕಳು ಕೂಡ ನೋಡಲೇಬೇಕಾದ ಚಿತ್ರ. ಎಂದು ಹೇಳಿಕೊಳ್ಳುವ ಈ “ಒಂದು ಗಂಟೆಯ ಕಥೆ” ಚಿತ್ರದಲ್ಲಿ ಅಜಯ್ ರಾಜ್, ಶನಾಯ ಕಾಟ್ವೆ, ಸ್ವಾತಿ ಶರ್ಮ, ಪಾಪ ಪಾಂಡು ಚಿದಾನಂದ್, ಸಿಲ್ಲಿ ಲಲ್ಲಿ ಆನಂದ್, ಪ್ರಕಾಶ್ ತುಮಿನಾಡು, ಯಶ್ವಂತ್ ಸರ್ದೇಶ್ ಪಾಂಡೆ, ಪ್ರಶಾಂತ್ ಸಿಧ್ಧಿ, ನಾಂಗೇಂದ್ರ ಷಾ, ಮಜಾ ಟಾಕೀಸ್ ರೆಮೋ, ಚಂದ್ರ ಕಲಾ, ಮಿಮಿಕ್ರಿ ಗೋಪಿ, ಕುಳ್ಳ ಸೋಮು, ಹಿರಿಯ ಕಲಾವಿದೆ ಎಮ್ ಎನ್. ಲಕ್ಷ್ಮೀ ದೇವಿ ಎಂದು ಬಹಳಷ್ಟು ಕಲಾವಿದರು ಸೇರಿಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗಿಸಲಿದ್ದಾರೆ. ಇಂಥ ಹಾಸ್ಯಮಯ ಚಿತ್ರಕ್ಕೆ ಸೂರ್ಯಕಾಂತ್ ರವರ ಛಾಯಾಗ್ರಹಣವಿದ್ದು, ಗಣೇಶ್ ಮಲ್ಲಯ್ಯ ರವರ ಸಂಕಲನವಿದೆ.
ಡೆನ್ನಿಸ್ ವಲ್ಲಭನ್ ಸಂಗೀತ ನೀಡಿರುವ ಈ ಚಿತ್ರದ ‘ನಾನು ಕ್ಷಮಿಸೋದಿಲ್ಲ’ ಎಂಬ ಹಾಡು ಸಾಮಾಜಿಕ ಜಾಲ ತಾಣದಲ್ಲಿ ಈಗಾಗಲೇ ವೈರಲ್ ಆಗಿದ್ದು ಮುಂದೆ ನಮ್ಮ ಹೆಣ್ಣು ಮಕ್ಕಳ ಮನದಲ್ಲಿ ಗಟ್ಟಿಯಾಗಿ ನಿಲ್ಲಲಿದೆ.
ಇತ್ತೀಚೆಗೆ ಈ ಚಿತ್ರವೂ ಹೆಣ್ಣು ಮಕ್ಕಳಿಗೆ ಯಾವ ರೀತಿಯ ಅಭಿಪ್ರಾಯ ಮೂಡಿಸಬಹುದೆಂಬ ದೃಷ್ಟಿಯಿಂದ ಒಂದಷ್ಟು ಯುವತಿಯರಿಗೆ ಪ್ರತ್ಯೇಕ ಪ್ರದರ್ಶನ ಕೊಟ್ಟಾಗ, ಪ್ರತಿಯೊಬ್ಬರು ಚಪ್ಪಾಳೆ ತಟ್ಟಿ ತಮ್ಮ ಮನಃಪೂರ್ವಕ ಮೆಚ್ಚುಗೆಯನ್ನು, ಅಭಿನಂದನೆಯನ್ನು ವ್ಯಕ್ತಪಡಿಸಿದ್ದು ಸ್ವತಃ ತಾವೆ ಸಂದರ್ಶನವನ್ನು ಕೊಟ್ಟಿದ್ದು, ಸಧ್ಯದಲ್ಲೇ ಅದು ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ
Be the first to comment