ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ರಾಧೆ ಶ್ಯಾಮ್’ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಚಿತ್ರ ಮಾರ್ಚ್ 11ರಂದು ರಿಲೀಸ್ ಆಗಲಿದೆ.
ರಾಧಾ ಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್’ ಚಿತ್ರದಲ್ಲಿ ವಿಕ್ರಮಾದಿತ್ಯನ ಪಾತ್ರದಲ್ಲಿ ಪ್ರಭಾಸ್ ಮತ್ತು ಅವರ ಪ್ರೇಯಸಿಯ ಪಾತ್ರದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ.
ರಾಧೆ ಶ್ಯಾಮ್’ ಚಿತ್ರವನ್ನು ಈ ಮೊದಲು ಜನವರಿ 14ರಂದು ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆ ಮುಂದೂಡಲಾಯಿತು. ಈಗ ಮತ್ತೆ ಚಿತ್ರತಂಡ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಮಾರ್ಚ್ 11ರಂದು ಚಿತ್ರ ಬೆಳ್ಳಿತೆರೆಗೆ ಬರಲಿದೆ.
ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಪ್ರಸ್ತುತಪಡಿಸುವ ‘ರಾಧೆ ಶ್ಯಾಮ್’ ಚಿತ್ರದ ನಿರ್ಮಾಣವನ್ನು ಯುವಿ ಕ್ರಿಯೇಷನ್ಸ್ ಮಾಡಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಚಿತ್ರಕ್ಕಿದೆ.
ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಭಾಗ್ಯಶ್ರೀ, ಸತ್ಯರಾಜ್, ಜಗಪತಿ ಬಾಬು, ಮುರಳಿ ಶರ್ಮಾ, ಜಯರಾಮ್ ಮೊದಲಾದ ಕಲಾವಿದರು ನಟಿಸಿದ್ದಾರೆ.

Be the first to comment