ಮಾರ್ಚ್ 10ಕ್ಕೆ ಉಪ್ಪಿ ಚಿತ್ರ ಅನೌನ್ಸ್

ಮಾರ್ಚ್ 10 ನೇ ಸೂಪರ್ ಸ್ಟಾರ್ ಉಪ್ಪಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅನೌನ್ಸ್ ಆಗಲಿದೆ.

ಈ ಸುದ್ದಿ ಬೆನ್ನಲ್ಲೇ ಈಗ ಈ ಚಿತ್ರದ ಟೈಟಲ್ , ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರು ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಮೂರನೇ ಚಿತ್ರವಾಗಿ ಉಪ್ಪಿಯ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಇದೇ ತಿಂಗಳ 10ರಂದು ಉಪ್ಪಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಸಿನಿಮಾ ಶುರುವಾಗುವ ಮುನ್ನ ಚಿತ್ರದ ಆಡಿಯೋ ರೈಟ್ಸ್ ಲಹರಿ ತೆಕ್ಕೆಗೆ ಜಾರಿದೆ. ಕೆಪಿ ಶ್ರೀಕಾಂತ್ ನಿರ್ಮಾಣದ ಹಿಂದಿನ ಎರಡು ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದರು. ಈಗ ಮೂರನೇ ಚಿತ್ರದಲ್ಲೂ ಚರಣ್ ರಾಜ್ ಸಂಗೀತ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಮಾರ್ಚ್ 10 ರಂದು ಉಪ್ಪಿ ಡೈರೆಕ್ಷನ್ ಮಾಡುವ ಸಿನಿಮಾ ಮಾತ್ರ ಅನೌನ್ಸ್ ಆಗಲಿದೆ. ಚಿತ್ರದ ಶೂಟಿಂಗ್ ಶುರುವಾದ ಬಳಿಕ ಚಿತ್ರದ ಹೆಸರನ್ನು ರಿವೀಲ್ ಆಗುವ ಸಾಧ್ಯತೆ ಇದೆ. 7 ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡುತ್ತಿರುವ ಉಪ್ಪಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಾರೆ.

ಉಪ್ಪಿ 2 ಚಿತ್ರದ ನಂತರ ಉಪೇಂದ್ರ ಯಾವುದೇ ಚಿತ್ರ ನಿರ್ದೇಶನ ಮಾಡಿಲ್ಲ. ಸದ್ಯ ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ ಸಹ ಜತೆಗೂಡಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!