ಮಾ.10ಕ್ಕೆ ರಾಜ್ಯಾದ್ಯಂತ ಬಿಡುಗಡೆ ಸೈನ್ಸ್ ಫಿಕ್ಷನ್ ಚಿತ್ರ ‘ಮಂಡಲ’

ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಬಿಡುಗಡೆಗೆ ಸಜ್ಜಾಗಿದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯ ಈ ಚಿತ್ರ ಮಾರ್ಚ್ 10ರಂದು ತೆರೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲು ರೆಡಿಯಾಗಿದೆ. ಅದಕ್ಕೂ ಮುನ್ನ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವ ಟ್ರೇಲರ್ ಬಿಡುಗಡೆ ಮಾಡಿ ಗಮನ ಸೆಳೆದಿದೆ. ಟ್ರೇಲರ್ ಬಿಡುಗಡೆ ಮುಖಾಂತರ ಚಿತ್ರತಂಡ ಸಿನಿಮಾ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಅಜಯ್ ಸರ್ಪೇಷ್ಕರ್ ಮಾತನಾಡಿ ಸೈನ್ಸ್ ಫಿಕ್ಷನ್ ಸಿನಿಮಾವಿದು. ಕನ್ನಡಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ತುಂಬಾನೇ ಕಡಿಮೆ. ಆದ್ರಿಂದ ಈ ರೀತಿಯ ಜಾನರ್ ಸಿನಿಮಾ ಮಾಡಲು ನಿರ್ಧರಿಸಿ ಕಥೆ ಬರೆದೆ. ಫೋಟೋಗ್ರಫಿಯಲ್ಲಿ ಆಸಕ್ತಿ ಇತ್ತು, ಕಿರುಚಿತ್ರ ನಿರ್ದೇಶನ ಮಾಡಿದ್ದೇನೆ. ಅದೆಲ್ಲ ಅನುಭವ ಇಟ್ಟುಕೊಂಡು ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ವಿಶ್ಯುವಲ್ ಎಫೆಕ್ಟ್ಸ್ ತುಂಬಾನೇ ಇದೆ ಅಷ್ಟೇ ಚೆನ್ನಾಗಿ ಕೂಡ ಮೂಡಿ ಬಂದಿದೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾವಿದು. ಮಾರ್ಚ್ 10ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದು ಮಾಹಿತಿ ಹಂಚಿಕೊಂಡ್ರು.

ನಟ ಕಿರಣ್ ಶ್ರೀನಿವಾಸ್ ಮಾತನಾಡಿ ನಾನು ಚಿಕ್ಕ ವಯಸ್ಸಿನಿಂದಲೂ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ, ಕನ್ನಡದಲ್ಲಿ ಇಂತಹ ಸಿನಿಮಾ ಬರುತ್ತಿದೆ ಎಂದಾಗ ಎರಡು ಕೈಯಿಂದ ಅವಕಾಶ ಬಾಚಿಕೊಂಡೆ. ಚಿತ್ರದ ತಾರಾಬಳಗ ಕೂಡ ಸಿನಿಮಾ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಪ್ರಕಾಶ್ ಬೆಳವಾಡಿ, ಸುಧಾ ಮೇಡಂ ಇವರೆಲ್ಲರ ಜೊತೆ ನಟಿಸಲು ಒಂದೊಳ್ಳೆ ಅವಕಾಶ ಸಿಕ್ತು. ಎಲ್ಲಾ ರೀತಿಯ ಸಿನಿಮಾ ಮಾಡಿದ್ದೇವೆ ಇದೀಗ ‘ಮಂಡಲ’ ಮೂಲಕ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಿದ್ದೇನೆ. ಎಲ್ಲರೂ ಈ ರೀತಿಯ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ರು.

ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ ನಾನು ಜಾಸ್ತಿ ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾ ನೋಡುತ್ತಿದ್ದೆ, ಕನ್ನಡದಲ್ಲೂ ಈ ರೀತಿಯ ಜಾನರ್ ಸಿನಿಮಾ ಯಾಕೆ ಬರಲ್ಲ ಎಂದು ಯೋಚಿಸುತ್ತಿದ್ದೆ. ಆ ಸಮಯದಲ್ಲಿ ಸಿಕ್ಕ ಸಿನಿಮಾವಿದು. ಏರೋಸ್ಪೇಸ್ ಇಂಜಿನಿಯರ್ ಪಾತ್ರ ನನ್ನದು. ಮಾಯಾ ಪಾತ್ರದಲ್ಲಿ ನಟಿಸಿದ್ದೇನೆ. ಕ್ಯಾರೆಕ್ಟರ್ ತುಂಬಾ ಇಷ್ಟವಾಯ್ತು. ತುಂಬಾ ಸೀರಿಯಸ್ ಪಾತ್ರ ನನ್ನದು. ಬೇರೆ ಸಿನಿಮಾಗಳಿಗಿಂತ ತುಂಬಾ ಡಿಫ್ರೆಂಟ್ ಪಾತ್ರವಿದು ಎಂದು ಮಾಹಿತಿ ಹಂಚಿಕೊಂಡ್ರು.

ನಟಿ ಸಂಯುಕ್ತ ಹೊರನಾಡು ಮಾತನಾಡಿ ಈ ಸಿನಿಮಾದ ಕಾನ್ಸೆಪ್ಟ್ ತುಂಬಾ ಇಂಟ್ರಸ್ಟ್ ಎನಿಸ್ತು. ವಿಜ್ಞಾನದ ಬಗ್ಗೆ ಯಾವಾಗಲೂ ಎ್ಲಲರಿಗೂ ಒಂದು ಕುತೂಹಲವಿರುತ್ತೆ. ಈ ಸಿನಿಮಾ ಕೂಡ ಅಷ್ಟೇ ಕುತೂಹಲ ಮೂಡಿಸುತ್ತೆ. ಚಿತ್ರದಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ತಿಳಿಸಿದ್ರು.

ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು VFX, ಪ್ರಕಾಶ್ ಬೆಳವಾಡಿ ಹಾಗೂ ಅಜೆಯ್ ಸರ್ಪೇಷ್ಕರ್ ಚಿತ್ರಕಥೆ ‘ಮಂಡಲ’ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!