Marakastra: ನಿರೀಕ್ಷೆ ಮೂಡಿಸಿದ ಮಾರಕಾಸ್ತ್ರ ನಾಳೆ ತೆರೆಗೆ

ಆಕ್ಷನ್ ಕ್ವೀನ್ ಮಾಲಾಶ್ರೀ ನಟಿಸಿರುವ ಮಾರಕಾಸ್ತ್ರ ಈ ವಾರ ಬಿಡುಗಡೆ ಆಗುತ್ತಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.

ಮಾರಕಾಸ್ತ್ರ ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್, ದೇಶಪ್ರೇಮ ಇರುವ ಚಿತ್ರ. ಅಕ್ಟೋಬರ್ 13 ರಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹುಟ್ಟಿಸಿದೆ.

ಚಿತ್ರವನ್ನು ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಶ್ರೀಮತಿ ಕೋಮಲ ನಟರಾಜ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗುರುಮೂರ್ತಿ ಸುನಾಮಿ ನಿರ್ದೇಶನ ಇದೆ. ಧನಕುಮಾರ್. ಕೆ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಮಾಲಾಶ್ರೀ ಖಡಕ್ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಕ್ರೈಮ್ ರಿಪೋರ್ಟರ್ ಆಗಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ. ಆನಂದ್ ಆರ್ಯ(ನಾಯಕ), ಅಯ್ಯಪ್ಪ ಶರ್ಮಾ, ಶಿವಮಣಿ, ಉಮೇಶ್, ಹೊನ್ನವಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ್, ಭರತ್ ಸಿಂಗ್, ಉಗ್ರಂ ಮಂಜು, ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಹಿನ್ನೆಲೆ ಸಂಗೀತ ಸತೀಶ್ ಬಾಬು, ಸಾಹಿತ್ಯ ಮತ್ತು ಸಂಗೀತವನ್ನು ಮಂಜು ಕವಿ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ಎನ್.ವಿಶ್ವ ಸಂಕಲನವಿದೆ. ಹಾಡುಗಳಿಗೆ ಅನನ್ಯ ಭಟ್, ಅನುರಾಧ ಭಟ್, ಸಂತೋಷ್ ವೆಂಕಿ, ವಿಜಯ್ ಪ್ರಕಾಶ್, ಶಮಿತಾ ಮಲ್ನಾಡ್, ನಟರಾಜ್ ಹಾಡಿದ್ದಾರೆ.

ನಿರ್ದೇಶಕ ಗುರುಮೂರ್ತಿ ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದವರು. ಬಳ್ಳಾರಿಯ ವಿದ್ಯಾನಗರದಲ್ಲಿರುವ ‘ನವ ಜೀವನ ಅಂಗವಿಕಲರ ಸಂಸ್ಥೆ’ಯಲ್ಲಿ ಓದಿದ್ದಾರೆ. ರೈತಾಪಿ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾದರೂ ಸಿನಿಮಾ ಮೇಲಿನ ಆಸಕ್ತಿ ಅವರನ್ನು ನಿರ್ದೇಶಕ ಆಗಿ ಮಾಡಿದೆ.

ಮಾಲಾಶ್ರೀ ಈ ಸಿನಿಮಾಕ್ಕೆ ಮೊದಲು ಹನ್ನೊಂದು ದಿನಗಳ ಕಾಲ್‌ಶೀಟ್ ನೀಡಿದ್ದರು. ಆಮೇಲೆ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಇದರಿಂದ ನಾಲ್ಕು ಸಾಹಸ ಸನ್ನಿವೇಶಗಳನ್ನು ಅದ್ಧೂರಿಯಾಗಿ ಚಿತ್ರೀಕರಿಸಲು ಸಾದ್ಯವಾಯಿತು ಎಂದು ನಿರ್ದೇಶಕರು ಹೇಳಿದ್ದಾರೆ.

‘ಮಾರಕಾಸ್ತ್ರ’ ಚಿತ್ರದ ಸಾಹಸ ಸನ್ನಿವೇಶಗಳು ಮಾಲಾಶ್ರೀಯವರ ಹಿಂದಿನ ಸಾಹಸ ಚಿತ್ರಗಳಾದ ‘ಚಾಮುಂಡಿ’, ‘ದುರ್ಗಿ’, ‘ಶಕ್ತಿ’ ಮುಂತಾದ ಚಿತ್ರಗಳನ್ನು ನೆನಪಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!