ಮಾನ್ಯತಾಗೆ ಫೇಸ್ ಭಾರತ್ ರತನ್ ಪ್ರಶಸ್ತಿ

ಬೆಂಗಳೂರಿನ ಬಾಲಪ್ರತಿಭೆ ಮಾನ್ಯತಾ ಜಯ ಕುಮಾರ್ ಅವರಿಗೆ ದೆಹಲಿಯಲ್ಲಿ ಫೇಸ್ ಭಾರತ್ ರತನ್ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಚೈತನ್ಯ ಟೆಕ್ನೋ ಸ್ಕೂಲ್ ನಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ 10 ವಯಸ್ಸಿನ ಮಾನ್ಯತಾ ಅವರಿಗೆ ವೆಸ್ಟ್ರನ್ ಹಾಗೂ ಭರತನಾಟ್ಯ ನೃತ್ಯಕ್ಕಾಗಿ ಈ ಪ್ರಶಸ್ತಿ ಸಿಕ್ಕಿದೆ.

ಮೂರನೇ ವಯಸ್ಸಿನಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದ ಮಾನ್ಯತಾ, ಅಭಿನಯ ಕಲೆಯನ್ನು ಸಹ ಹೊಂದಿದ್ದಾಳೆ.

ಯುನಿಸೆಫ್ ನ ದೆಹಲಿಯ ರಾಯಭಾರಿ ಡಾ. ಸುರೇಶ್ ಬಾಬು ಅವರು ಭಾರತ್ ರತನ್ ಪ್ರಶಸ್ತಿ ಗೆ ನಾಮ ನಿರ್ದೇಶನ ಮಾಡಿದ್ದರು. ಮಾನ್ಯತಾ ಅಲ್ಲಿ ತನ್ನ ನೃತ್ಯ ಪ್ರದರ್ಶನದ ಮೂಲಕ ಪ್ರಶಸ್ತಿಗೆ ಭಾಜನ ಆಗಿದ್ದಾಳೆ.
ಜಯ ಕುಮಾರ್ – ಜ್ಯೋತಿ ಐಶ್ವರ್ಯ ದಂಪತಿಯ ಪುತ್ರಿ ಆಗಿರುವ ಮಾನ್ಯತಾ, ಸಾಯಿ ಕೋಷಿನ್ ಕುಮಾರ್ ಎನ್ನುವ ಸಹೋದರರನ್ನು ಹೊಂದಿದ್ದಾಳೆ.

” ನಮ್ಮ ಮಗಳಿಗೆ ದೆಹಲಿಯಲ್ಲಿ ಪುರಸ್ಕಾರ ಸಿಕ್ಕಿದೆ. ಆದರೆ ಕರ್ನಾಟಕದಲ್ಲಿ ಪ್ರತಿಭೆಯನ್ನು ಗುರುತಿಸುವ ಕೆಲಸ ಆಗಿಲ್ಲ. ಇದು ತುಂಬಾ ಬೇಸರದ ಸಂಗತಿ. ಕನ್ನಡ ಚಲನಚಿತ್ರದಲ್ಲೂ ಅವಳಿಗೆ ಅವಕಾಶ ಸಿಕ್ಕಿಲ್ಲ. ಅವಳಿಗೆ ಸೂಕ್ತ ಅವಕಾಶ ಸಿಗಬೇಕಿದೆ” ಎಂದು ತಾಯಿ ಜ್ಯೋತಿ ವಿನಂತಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!