‘ಟಾಕ್ಸಿಕ್’ ಮುಂದೂಡಿಕೆ ಬೆನ್ನಲ್ಲೇ ಹಲವು ಚಿತ್ರ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಿಡುಗಡೆ ದಿನಾಂಕ ಮುಂದೂಡಿಕೆ ಬೆನ್ನಲ್ಲೇ, ಹಲವು ಚಿತ್ರಗಳು ಈ ಸಂದರ್ಭದಲ್ಲಿ ಬಿಡುಗಡೆ ಆಗಲು ಮುಂದಾಗಿವೆ.

ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಮಾರ್ಚ್ 26ಕ್ಕೆ ರಿಲೀಸ್ ಆಗಬೇಕಿತ್ತು. ‘ಟಾಕ್ಸಿಕ್’ ಮಾರ್ಚ್ 19ಕ್ಕೆ ಫಿಕ್ಸ್ ಆಗಿದ್ದ ಕಾರಣ ಒಂದು ವಾರ ಈ ಚಿತ್ರವನ್ನು ತಡವಾಗಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಈಗ ‘ಟಾಕ್ಸಿಕ್’ ರಿಲೀಸ್ ಮುಂದೆ ಹೋದ ಹಿನ್ನೆಲೆಯಲ್ಲಿ, ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಈ ಸಿನಿಮಾವನ್ನು ಪವನ್ ಆಪ್ತ ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕನ್ನಡದ ಡಾರ್ಲಿಂಗ್ ಡಾರ್ಲಿಂಗ್ ಕೃಷ್ಣ ತಮ್ಮ ‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ಈಗ ಸ್ಪರ್ಧೆ ಕಡಿಮೆ ಆಗಿದೆ.

ಮಾರ್ಚ್ 19ರಂದು ಹಿಂದಿಯ ಧುರಂಧರ್ 2 ಬಿಡುಗಡೆಯಾಗಲಿದೆ. ಟಾಕ್ಸಿಕ್ ಹಿಂದೆ ಸರಿದ ಕಾರಣ ಈ ಚಿತ್ರಕ್ಕೆ ದೊಡ್ಡ ಸ್ಪರ್ಧೆ ಇಲ್ಲವಾಗಿದೆ.

ಇನ್ನೊಂದೆಡೆ ದುರಂಧರ್2 ಚಿತ್ರಕ್ಕೆ ದಕ್ಷಿಣದ ಮಾರುಕಟ್ಟೆಯಲ್ಲಿ ಹೆಚ್ಚು ಹೈಪ್ ಇಲ್ಲದ ಕಾರಣ ಪವನ್ ಕಲ್ಯಾಣ್ ತಮ್ಮ ಚಿತ್ರವನ್ನು ಅಂದೇ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!