ಚಿತ್ರರಂಗದಲ್ಲಿ ಬೆಳೆಯುತ್ತಿರುವ ಈ ಯುವ ನಟನ ಕೆಲಸವನ್ನು ಮೆಚ್ಚಲೇಬೇಕು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಪುತ್ರ ಮನುರಂಜನ್ “ಮುಗಿಲ್ ಪೇಟೆ” ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರ ಆಲೋಚನೆ ಮತ್ತು ಔದಾರ್ಯ ಬಹಳ ವಿಶೇಷವಾಗಿದೆ, ಯಾಕೆಂದರೆ ಕರೋನಾ ಹಾವಳಿಯಿಂದ ಇಡೀ ಚಿತ್ರೋದ್ಯಮವೇ ಸಂಕಷ್ಟದಲ್ಲಿ ಸಿಲುಕಿದೆ.
ಇಂಥ ಪರಿಸ್ಥಿತಿಯಲ್ಲಿ “ಮುಗಿಲ್ ಪೇಟೆ” ಚಿತ್ರದಲ್ಲಿ ದುಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ 5,000 ಸಾವಿರ ಹಣವನ್ನು ಅವರ ಅಕೌಂಟ್ ಗೆ ಜಮಾ ಮಾಡಲು ಮನುರಂಜನ್ ಮುಂದಾಗಿದ್ದಾರೆ. ಇದು ಅವರಿಗೆ ಸಿನಿಮಾ ಮೇಲಿನ ಪ್ರೀತಿ ಹಾಗೂ ತಂಡದಲ್ಲಿ ದುಡಿದವರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎನ್ನಬಹುದು.
ಮನುರಂಜನ್ ಹೇಳುವ ಹಾಗೆಯೇ : ಕೊರೋನ ಸಾಂಕ್ರಾಮಿಕ ವೈರಸ್ ಜಗತ್ತನ್ನು ಆವರಿಸಿ ಒಂದು ವರ್ಷಕ್ಕೂ ಜಾಸ್ತಿಯಾಗಿದೆ. ಈ ವೈರಸ್ಗೆ ಅನೇಕ ಕುಟುಂಬಗಳು ನಲುಗಿ ಹೋಗಿದೆ. ಅವುಗಳಲ್ಲಿ ನನ್ನ ಕನ್ನಡ ಸಿನೆಮಾ ಕಲಾವಿದರ ಕುಟುಂಬವು ಹೊರತಾಗಿಲ್ಲ.
ಮನೆಯಲ್ಲಿದ್ದರೆ ಸುರಕ್ಷಿತವಾಗಿರುತ್ತೇವೆಂದು ನಾವೆಲ್ಲ ಭಾವಿಸಿರುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಕೊರೋನಾ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ನನ್ನ ಸ್ನೇಹಿತರ ನೆರವಿಗೆ ನಿಲಬೇಕದದ್ದು ನನ್ನ ಕರ್ತವ್ಯ. ಸದ್ಯ ಮುಗಿಲ್ ಪೇಟೆ ಸಿನಿಮಾದಲ್ಲಿ ನಾನು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದೇನೆ.
ನನ್ನ ಈ ಒಂದು ವರ್ಷದ ಪ್ರಾಜೆಕ್ಟ್ ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ನನ್ನ ಸಿನಿಮಾಕ್ಕಾಗಿ ತನುಮನವನ್ನು ಅರ್ಪಿಸಿದ್ದಾರೆ. ಈಗ ಅವರ ಸಂಕಷ್ಟಕಾಲದಲ್ಲಿ ಅವರ ಜೊತೆಗೆ ಅವರ ಕಷ್ಟಕ್ಕೆ ಹೆಗಲು ಕೊಡಬೇಕಾಗಿರುವುದು ನನ್ನ ಜವಾಬ್ದಾರಿ.
ಹೀಗಾಗಿ ಮುಗಿಲ್ ಪೇಟೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ನನ್ನವರಿಗಾಗಿ ಈ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡುವ ಸಣ್ಣ ಪ್ರಯತ್ನ. ದಯವಿಟ್ಟು ಎಲ್ಲರೂ ಮನೆಯಲ್ಲೇ ಇರಿ.
ಸುರಕ್ಷಿತವಾಗಿರಿ. ನಿಮ್ಮ ಕೈಲಾದಷ್ಟು ಇತರರಿಗೂ ಸಹಾಯ ಮಾಡಿ ಎಂದು ಹೇಳಿಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಾಯಕರಾಗಿ ಅಭಿನಯಿಸುತ್ತಿರುವ ಈ ಮುಗಿಲ್ ಪೇಟೆ ಚಿತ್ರವನ್ನು ಭರತ್ .ಎಸ್. ನಾವುಂದ ನಿರ್ದೇಶನ ಮಾಡುತ್ತಿದ್ದು , ರಕ್ಷ ವಿಜಯಕುಮಾರ್ ನಿರ್ಮಿಸುತ್ತಿದ್ದಾರೆ. ಕೊರೋನಾ ಹಾವಳಿಯ ಈ ಸಮಯದಲ್ಲಿ ನಾಯಕನ ಜೊತೆಗೆ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಒಳ್ಳೆ ವಿಚಾರವೇ ಸರಿ.
Be the first to comment