ಮಾನ್ಸೂನ್ ರಾಗದ ಟ್ರೈಲರ್ ರಿಲೀಸ್

ಡಾಲಿ ಧನಂಜಯ ನಟನೆಯ ಮಾನ್ಸೂನ್ ರಾಗ ಚಿತ್ರದ ಮಾನ್ಸೂನ್ ರಾಗ ಟ್ರೈಲರ್ ಬಿಡುಗಡೆ ಆಗಿದ್ದು ಕುತೂಹಲ ಮೂಡಿಸಿದೆ.

ಟ್ರೈಲರ್ ನಲ್ಲಿ ಈ ಚಿತ್ರ ಭಿನ್ನ ಎನಿಸುವ ದೃಶ್ಯಗಳು ಕಂಡು ಬರುತ್ತಿವೆ. ಕೆಲ ದಿನಗಳ ಹಿಂದೆ ಈ ಚಿತ್ರದ “ಮುದ್ದಾದ ಮೂತಿ” ಹಾಡು ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಪ್ರಮೋದ್ ಮರವಂತೆ ಸಾಹಿತ್ಯದ ಈ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಚಿತ್ರ ಆಗಸ್ಟ್ 19ರಂದು ಚಿತ್ರಮಂದಿರಕ್ಕೆ ಬರುವುದಾಗಿ ಅಧಿಕೃತ ಘೋಷಣೆ ಮಾಡಿದೆ.
ಸಾಕಷ್ಟು ತಿಂಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್‌ಗೆ ಸಾಕಷ್ಟು ದಿನ ಬಾಕಿ ಇರುವಾಗಲೇ ಚಿತ್ರಮಂದಿರಗಳಲ್ಲಿ ‘ಮಾನ್ಸೂನ್ ರಾಗ’ ಚಿತ್ರದ ಕಟೌಟ್‌ಗಳನ್ನು ಹಾಕಲಾಗಿದೆ.

ಮಾಸ್‌ ಮತ್ತು ಕ್ಲಾಸ್ ಸಿನಿಮಾ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ 70-80ರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಸಿನಿಮಾವನ್ನು ರವೀಂದ್ರನಾಥ್ ನಿರ್ದೇಶನ ಮಾಡಿದ್ದು, ಎ.ಆರ್. ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಸಂಭಾಷಣೆಯನ್ನು ಗುರು ಕಶ್ಯಪ್ ಬರೆದಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!