ಅಘನ್ಯ ಪಿಕ್ಚರ್ಸ್ ಅವರು ನಿರ್ಮಿಸುತ್ತಿರುವ ‘ಶಂಭೋ ಶಿವ ಶಂಕರ’ ಚಿತ್ರದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಆರ್ ವಿ ಮಮತ ಆರಂಭ ಫಲಕ ತೋರಿದರೆ, ನಿರ್ಮಾಪಕ ವರ್ತೂರು ಮಂಜು ಕ್ಯಾಮೆರಾ ಚಾಲನೆ ಮಾಡಿದರು.
ಶೀರ್ಷಿಕೆ ಕೇಳಿದರೆ ಭಕ್ತಿ ಪ್ರಧಾನ ಚಿತ್ರ ಅನಿಸುತ್ತದೆ. ಆದರೆ ಇದೊಂದು ಸಸ್ಪೆನ್ಸ್ ಚಿತ್ರ. ಶಂಭೋ ಶಿವ ಶಂಕರ ಎನ್ನುವುದು ಮೂರು ಪಾತ್ರಗಳ ಹೆಸರು.
ಶಂಭುವಿನ ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರ ರೋಹಿತ್ ನಿರ್ವಹಣೆ ಮಾಡುತ್ತಿದ್ದಾರೆ.ಕಿರುತೆರೆಯಲ್ಲಿ ಯಶಸ್ಸು ಕಂಡ ‘ಜೋಡಿ ಹಕ್ಕಿ’ ಸೇರಿಯ ಹಲವು ಧಾರಾವಾಹಿ ಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಈ ಚಿತ್ರದ ನಿರ್ದೇಶಕರು. ಬೆಳಿತೆರೆಯಲ್ಲಿ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಶಂಕರ್ ಕೋನಮಾನಹಳ್ಳಿ ಅವರದೆ.
ಮುಹೂರ್ತ ಸಮಾರಂಭದ ನಂತರ ಮಾತನಾಡಿದ್ದ ನಿರ್ದೇಶಕ ಶಂಕರ್ ಇದೊಂದು ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚಾಗಿ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ಇದೊಂದು ಉತ್ತಮ ಚಿತ್ರವಾಗಿ ಮೂಡಿಬರಲಿದೆ ಎಂದರು. ಚಿತ್ರಕ್ಕೆ ಹಣ ಹೂಡಿರುವ ವರ್ತೂರು ಮಂಜು ಅವರು ಮಾತನಾಡಿ ‘ ನಾಯಕ ಅಭಯ್ ಪುನೀತ್ ನನ್ನ ಸ್ನೇಹಿತ. ಅವನಿಗಾಗಿ ಒಂದು ಚಿತ್ರ ನಿರ್ಮಾಣ ಮಾಡಬೇಕು ಅಂದುಕೊಂಡಿದೆ. ಅಭಯ್ ಮೂಲಕ ನಿರ್ದೇಶಕ ಶಂಕರ್ ಪರಿಚಯವಾಯಿತು. ಅವರು ಹೇಳುದ ಕಥೆ ತುಂಬಾ ಹುಡಿಸಿತು’. ಹಾಗಾಗಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.ಪಂಚತಂತ್ರದ ಬೆಡಗಿ ಸೋನಾಲ್ ಮಂತೆರೊ ಈ ಚಿತ್ರದ ನಾಯಕಿ. ತಮ್ಮ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನುತ್ತಾರೆ ಸೋನಾಲ್.ಚಿತ್ರದಲ್ಲಿ ಮೂರು ಹಾಡು ಹಾಗೂ ಮೂರು ಬಿಟ್ ಗಳಿದ್ದು ಹಿತನ್ ಸಂಗೀತ ನೀಡುತ್ತಿದ್ದಾರೆ. ಗೌಸ್ ಫೀರ್ ಹಾಗೂ ಹಿತನ್ ಹಾಡುಗಳನ್ನು ಬರೆದಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಕೆಲವು ದಿನಗಳ ಹಿಂದೆ ನಟರಾದ ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದರು.
Be the first to comment