ಸೂಪರ್ ಹಿಟ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಕಷ್ಟ ಎದುರಿಸಿದ್ದಾರೆ.
ಸಿನಿಮಾದ ನಿರ್ಮಾಪಕರಾದ ಶಾನ್ ಆಯಂಥೋನಿ, ಬಾಬು ಶಾಹಿರ್ಗೆ ಕೊಚ್ಚಿಯಲ್ಲಿರುವ ಇವರ ಕಚೇರಿಗೆ ನೋಟಿಸ್ ನೀಡಲಾಗಿದೆ. ಇವರು ಶೀಘ್ರವೇ ‘ಇಡಿ’ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿದೆ. ಈಗ ಜಾರಿ ನಿರ್ದೇಶನಾಲಯದ ನೋಟಿಸ್ಗೆ ನಿರ್ಮಾಪಕರು ಯಾವ ರೀತಿ ಉತ್ತರಿಸುತ್ತಾರೆ ನೋಡಬೇಕಿದೆ.
ಈ ಚಿತ್ರಕ್ಕೆ ಸಿರಾಜ್ ಎಂಬ ವ್ಯಕ್ತಿ 7 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಸಿನಿಮಾದಿಂದ ಬಂದ ಲಾಭದಲ್ಲಿ ಶೇ. 40ರಷ್ಟು ಲಾಭವನ್ನು ಇವರಿಗೆ ನೀಡುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಹೂಡಿಕೆದಾರ ಸಿರಾಜ್ಗೆ ಈ ಮೊತ್ತ ಸಿಕ್ಕಿಲ್ಲ. ಅವರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ ಎನ್ನಲಾಗಿದೆ. ಈ ಚಿತ್ರ 250 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಕಮರ್ಷಿಯಲ್ ಕೋರ್ಟ್ಗೆ ಸಿರಾಜ್ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಬಳಿಕ ಅವರು ಮರಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದ್ದರು.
ಎರ್ನಾಕುಲಂನ ಮರಾಡು ಪೊಲೀಸರು ಕೇರಳ ಹೈಕೋರ್ಟ್ಗೆ ವರದಿ ಸಲ್ಲಿಕೆ ಮಾಡಿದ್ದರು. ಆಗ ‘ಮಂಜುಮ್ಮೇಲ್ ಬಾಯ್ಸ್’ ತಂಡದವರು ಹಗರಣ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಮೇ ತಿಂಗಳಲ್ಲಿ ಈ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿತ್ತು. ‘ಗುಣ’ ಚಿತ್ರದ ಗೀತೆ ಬಳಸಿದ್ದಕ್ಕೆ ಇಳಯರಾಜ ಅವರು ತಂಡದ ಮೇಲೆ ಕೇಸ್ ಹಾಕಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
Be the first to comment