ವಿಜಯ್ ಸೇತುಪತಿಗೆ ಸಾಯಿ ಪಲ್ಲವಿ ಜೋಡಿ

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಸಿನಿಮಾದಲ್ಲಿ  ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಕಥೆಯನ್ನು ಮೊದಲು ಧನುಷ್ ಅವರಿಗೆ ವಿವರಿಸಲಾಗಿತ್ತು ಎನ್ನಲಾಗಿದೆ. ಸಂಭಾವನೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಅವರು ಯೋಜನೆಯಿಂದ ಹಿಂದೆ ಸರಿದಿದ್ದಾರೆ. ಬಳಿಕ ಸಿಂಬು ಹಾಗೂ ಧ್ರುವ್ ವಿಕ್ರಮ್ ಅವರ ಹೆಸರುಗಳು ಕೇಳಿಬಂದರೂ ಅಂತಿಮವಾಗಿ ವಿಜಯ್ ಸೇತುಪತಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. ‘ಚೆಕ್ಕ ಚಿವಂತ ವಾನಂ’ ಬಳಿಕ ಮಣಿರತ್ನಂ–ಸೇತುಪತಿ ಎರಡನೇ ಬಾರಿ ಕೈಜೋಡಿಸುತ್ತಿದ್ದಾರೆ.

ಮಣಿರತ್ನಂ ನಿರ್ದೇಶನದಲ್ಲಿ ಸಾಯಿ ಪಲ್ಲವಿ  ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಮೊದಲು ರುಕ್ಮಿಣಿ ವಸಂತ್ ಹೆಸರು ಕೇಳಿ ಬಂದಿತ್ತಾದರೂ, ಅಂತಿಮವಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ.

ಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ  ಫ್ರೆಶ್ ಕಾಂಬಿನೇಷನ್ ಸಿನಿಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಥಗ್ ಲೈಫ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಮಣಿರತ್ನಂ  ರೊಮ್ಯಾಂಟಿಕ್ ಪ್ರೇಮಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!