ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ಮಿಸಿರುವ ‘ನವರಸ’ ಹೆಸರಿನ ಸಿನೆಮಾ ಧಾರಾವಾಹಿ ವಿವಾದಕ್ಕೆ ಕಾರಣ ಆಗಿದ್ದು ಇದನ್ನು ಪ್ರಸಾರ ಮಾಡಿರುವ ನೆಟ್‌ಫ್ಲಿಕ್ಸ್ ಬ್ಯಾನ್ ಮಾಡುವಂತೆ ಮುಸ್ಲಿಂ ಸಮುದಾಯದಿಂದ ಆಗ್ರಹ ಕೇಳಿ ಬಂದಿದೆ.
ಸಿನಿಮಾದ ಪೋಸ್ಟರ್ ಒಂದು ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ. ನವರಸ’ ಸಿನಿಮಾದ ‘ಇನ್ಮಾಯ್’ ಹೆಸರಿನ ಭಾಗದಲ್ಲಿ ಸಿದ್ಧಾರ್ಥ್ ಹಾಗೂ ಪಾರ್ವತಿ ಮಿಲ್ಟನ್ ನಟಿಸಿದ್ದಾರೆ. ಈ ಸಿನಿಮಾದ ಜಾಹೀರಾತನ್ನು ನೆಟ್‌ಫ್ಲಿಕ್ಸ್ ಪತ್ರಿಕೆಗಳಿಗೆ ನೀಡಿದ್ದು ಜಾಹೀರಾತಿನಲ್ಲಿ ಮುಸಲ್ಮಾನರ ಪವಿತ್ರ ಗ್ರಂಥ ಖುರಾನ್‌ನ ಸಾಲನ್ನು ಮುದ್ರಿಸಲಾಗಿದೆ. ಇದು ಮುಸಲ್ಮಾನರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಸಲ್ಮಾನರ ನಂಬಿಕೆಯಂತೆ ಖುರಾನ್ ನ್ನು ಮುದ್ರಿಸಿದ ಹಾಳೆಗಳು ಪವಿತ್ರವಾಗಿದ್ದು ಅವು ಸುಡದಂತೆ, ಹಾಳಾಗದಂತೆ ರಕ್ಷಿಸಬೇಕಾಗುತ್ತದೆ. ಪತ್ರಿಕೆಯ ಮೇಲೆ ಖುರಾನ್ ಸಾಲು ಮುದ್ರಿಸಿ ನೆಟ್‌ಫ್ಲಿಕ್ಸ್ ಅಪಮಾನ ಮಾಡಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ನವರಸ’ ಅಂಥಾಲಜಿ ಸಿನಿಮಾ ಶೃಂಗಾರ, ಕರುಣ, ಹಾಸ್ಯ, ಭಯಾನಕ, ಭೀಬತ್ಸ, ರೌದ್ರ, ವೀರ, ಅದ್ಭುತ, ಶಾಂತ ಈ ಒಂಬತ್ತು ರಸಗಳನ್ನು ಪ್ರತಿನಿಧಿಸುವ ಸಿನಿಮಾ ಆಗಿದೆ. ವಿವಾದಕ್ಕೆ ಕಾರಣವಾಗಿರುವ ‘ಇನ್ಮಾಯ್’ ಸಿನಿಮಾ ಭಾಗವು ಭಯಾನಕ ರಸಕ್ಕೆ ಸಂಬಂಧಿಸಿದೆ.
ಸೂರ್ಯ, ವಿಜಯ್ ಸೇತುಪತಿ, ಸಿದ್ಧಾರ್ಥ್, ಪಾರ್ವತಿ ಮಿಲ್ಟನ್, ಗೌತಮ್ ವಾಸುದೇವ್ ಮೆನನ್ ಸೇರಿದಂತೆ ಹಲವು ಸ್ಟಾರ್ ನಟರು ನಟಿಸಿರುವ ಈ ಸಿನೆಮಾ ಧಾರಾವಾಹಿ ಸಾಕಷ್ಟು ಹಿಟ್ ಆಗಿದೆ.
Be the first to comment