ಮುಂದಿನ ತಿಂಗಳ 15ಕ್ಕೆ “ಮನೆ ಮಾರಾಟಕ್ಕಿದೆ”

ಎಸ್.ವಿ. ಪ್ರೋಡಕ್ಷನ್  ಲಾಂಛನದಲ್ಲಿ ಎಸ್.ವಿ.ಬಾಬು ಅವರು ನಿರ್ಮಾಣ ಮಾಡಿರುವ ‘ಮನೆ ಮಾರಾಟಕ್ಕಿದೆ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮುಂದಿನ ತಿಂಗಳು ನವಂಬರ್ 15ಕ್ಕೆ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.

‘ಶಿಶಿರ, ‘ಶ್ರಾವಣಿ ಸುಬ್ರಮಣಿ`, ‘ಶ್ರೀಕಂಠ`, ‘ಪಟಾಕಿ’ ಚಿತ್ರಗಳ ನಿರ್ದೇಶಕರಾದ ಮಂಜು ಸ್ವರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್‍ಬಾಬು ಅವರ ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಕಂಬಿ ರಾಜು, ಕಲೈ ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ರಾಜೇಶ್ ನಟರಂಗ, ಕಾರುಣ್ಯರಾಮ್, ಶಿವರಾಂ, ಗಿರಿ, ನೀನಾಸಂ ಅಶ್ವತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!