ಎಸ್.ವಿ.ಪ್ರೋಡಕ್ಷನ್ ಲಾಂಛನದಲ್ಲಿ ಎಸ್.ವಿ.ಬಾಬು ಅವರು ನಿರ್ಮಾಣ ಮಾಡಿರುವ ‘ಮನೆ ಮಾರಾಟಕ್ಕಿದೆ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೆ ರಾಜ್ಯಾದ್ಯಾಂತ ಬಿಡುಗಡೆಯಾಗಲಿದೆ.
‘ಶಿಶಿರ, ‘ಶ್ರಾವಣಿ ಸುಬ್ರಮಣಿ`, ‘ಶ್ರಿಕಂಠ`, ‘ಪಟಾಕಿ’ ಚಿತ್ರಗಳ ನಿರ್ದೆಶಕರಾದ ಮಂಜು ಸ್ವರಾಜ್ ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೆಶನದ ಈ ಚಿತ್ರಕ್ಕೆ ಸುರೇಶ್ಬಾಬು ಅವರ ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಕಂಬಿ ರಾಜು, ಕಲೈ ನೃತ್ಯ ನಿರ್ದೆಶನ, ವಿಕ್ರಂ ಮೋರ್ ಸಾಹಸ ನಿರ್ದೆಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೆಶನ ಈ ಚಿತ್ರಕ್ಕಿದೆ.
ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ರಾಜೇಶ್ ನಟರಂಗ, ಕಾರುಣ್ಯರಾಮ್, ಶಿವರಾಂ, ಗಿರಿ, ನೀನಾಸಂ ಅಶ್ವತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Pingback: situs judi online
Pingback: patek philippe replica