ಮಂಡ್ಯ ಹೈದನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೇನೆಲ್ಲ ಸಾಹಸ ಮಾಡಿದ ಎಂಬುದನ್ನು ಹೇಳುವ ಚಿತ್ರ ಮಂಡ್ಯ ಹೈದ. ಈ ಚಿತ್ರದಲ್ಲಿ ಯುವನಟ ಅಭಯ್ ಚಂದ್ರು ಮಂಡ್ಯದ ಹುಡುಗನಾಗಿ ಕಾಣಿಸಿಕೊಂಡಿಸಿದ್ದು, ಭೂಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ, ಅಭಯ್ ಈಗ ತಮ್ಮ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯಹುಡುಗನಾಗಿ ಹೊರಹೊಮ್ಮಿದ್ದಾರೆ. ವಿ.ಶ್ರೀಕಾಂತ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡು ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.
ತೇಜಸ್ ಕ್ರಿಯೇಶನ್ಸ್ ಮೂಲಕ ಅಭಯ್ ತಂದೆ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದು, ಸದ್ಯದಲ್ಲೇ ಈ ಚಿತ್ರದ ಮತ್ತೊಂದು ಡ್ಯುಯೆಟ್ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ.
ತಮ್ಮ ಪ್ರೀತಿಯನ್ನು ಪಡೆಯಲು ಕೆಲವರು ಸಾಯ್ತಾರೆ, ಮತ್ತೆ ಕೆಲವರು ಸಾಯಿಸ್ತಾರೆ, ನಾಉಕ ಕೂಡ ಈ ಪ್ರೀತಿಯನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸ್ತಾನಾ ಅಥವಾ ತಾನೇ ಸಾಯ್ತಾನಾ ಎನ್ನುವುದೇ ಈ ಚಿತ್ರದ
ಕಥಾವಸ್ತು. ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಮನುಗೌಡ ಕೆಲಸ ಮಾಡಿದ್ದಾರೆ, ಬಲ ರಾಜವಾಡಿ, ಸುನಂದ ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Be the first to comment