ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಮಾರ್ಚ್ 10ರಂದು ಬಿಡುಗಡೆಗೆ ಸಜ್ಜಾಗಿದೆ.
ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯ ಈ ಚಿತ್ರ ತೆರೆ ಮೇಲೆ ಮ್ಯಾಜಿಕ್ ಮಾಡಲು ರೆಡಿಯಾಗಿದೆ.
ನಿರ್ದೇಶಕ ಅಜಯ್ ಸರ್ಪೇಷ್ಕರ್ ಅವರು ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ತುಂಬಾನೇ ಕಡಿಮೆ. ಆದ್ರಿಂದ ಈ ರೀತಿಯ ಜಾನರ್ ಸಿನಿಮಾ ಮಾಡಲು ನಿರ್ಧರಿಸಿ ಕಥೆ ಬರೆದೆ. ಫೋಟೋಗ್ರಫಿಯಲ್ಲಿ ಆಸಕ್ತಿ ಇತ್ತು. ಕಿರುಚಿತ್ರ ನಿರ್ದೇಶನ ಮಾಡಿದ್ದೇನೆ. ಅದೆಲ್ಲ ಅನುಭವ ಇಟ್ಟುಕೊಂಡು ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ವಿಶ್ಯುವಲ್ ಎಫೆಕ್ಟ್ಸ್ ತುಂಬಾನೇ ಇದೆ. ಅಷ್ಟೇ ಚೆನ್ನಾಗಿ ಕೂಡ ಮೂಡಿ ಬಂದಿದೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾವಿದು ಎಂದಿದ್ದಾರೆ.
ಕಿರಣ್ ಶ್ರೀನಿವಾಸ್ ಅವರು, ನಾನು ಚಿಕ್ಕ ವಯಸ್ಸಿನಿಂದಲೂ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ, ಕನ್ನಡದಲ್ಲಿ ಇಂತಹ ಸಿನಿಮಾ ಬರುತ್ತಿದೆ ಎಂದಾಗ ಎರಡು ಕೈಯಿಂದ ಅವಕಾಶ ಬಾಚಿಕೊಂಡೆ. ಚಿತ್ರದ ತಾರಾಬಳಗ ಕೂಡ ಸಿನಿಮಾ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಪ್ರಕಾಶ್ ಬೆಳವಾಡಿ, ಸುಧಾ ಮೇಡಂ ಇವರೆಲ್ಲರ ಜೊತೆ ನಟಿಸಲು ಒಂದೊಳ್ಳೆ ಅವಕಾಶ ಸಿಕ್ತು ಎಂದು ಹೇಳಿದ್ದಾರೆ.
ಶರ್ಮಿಳಾ ಮಾಂಡ್ರೆ ಅವರು, ಏರೋಸ್ಪೇಸ್ ಇಂಜಿನಿಯರ್ ಪಾತ್ರ ನನ್ನದು. ಮಾಯಾ ಪಾತ್ರದಲ್ಲಿ ನಟಿಸಿದ್ದೇನೆ. ಕ್ಯಾರೆಕ್ಟರ್ ತುಂಬಾ ಇಷ್ಟವಾಯ್ತು. ತುಂಬಾ ಸೀರಿಯಸ್ ಪಾತ್ರ ನನ್ನದು. ಬೇರೆ ಸಿನಿಮಾಗಳಿಗಿಂತ ತುಂಬಾ ಡಿಫ್ರೆಂಟ್ ಪಾತ್ರವಿದು ಎಂದು ತಿಳಿಸಿದ್ದಾರೆ.
ಸಂಯುಕ್ತ ಹೊರನಾಡು ಅವರು, ಈ ಸಿನಿಮಾದ ಕಾನ್ಸೆಪ್ಟ್ ತುಂಬಾ ಇಂಟ್ರಸ್ಟ್ ಎನಿಸ್ತು. ವಿಜ್ಞಾನದ ಬಗ್ಗೆ ಯಾವಾಗಲೂ ಎಲ್ಲರಿಗೂ ಒಂದು ಕುತೂಹಲವಿರುತ್ತೆ. ಈ ಸಿನಿಮಾ ಕೂಡ ಅಷ್ಟೇ ಕುತೂಹಲ ಮೂಡಿಸುತ್ತೆ. ಚಿತ್ರದಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದ್ದಾರೆ.
Be the first to comment