ಗುರುರಾಜ್ ನಿರ್ಮಾಣದ ಹೊಸ ಧಾರಾವಾಹಿ ಮನಸಾರೆ. ಧಾರಾವಾಹಿಯ ನಿರ್ದೇಶಕರು ರವಿ ಕಿಶೋರ್. ಸುನೀಲ್ ಪುರಾಣಿಕ್ ಅವರು ಇಲ್ಲಿ ತಂದೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ತಂದೆ ಮಗಳ ಸೂಕ್ಷ್ಮತೆ ಇದೆ. ಇದು ನನ್ನ ಗುರುರಾಜ್ ನಿರ್ದೇಶನದಲ್ಲಿ ಮೂರನೇ ಧಾರಾವಾಹಿ. ಎಲ್ಲ ವರ್ಗದ ಜನರಿಗೆ ಇಷ್ಟ ವಾಗುವಂತಹ ಕಥೆ ಇದರಲ್ಲಿದೆ. ಭಾರತೀಯ ಸಂಸ್ಕೃತಿಯಲ್ಲಿ ತಾಯಿಯ ಪ್ರೀತಿಗೆ ವಿಶೇಷ ಆದ್ಯತೆ. ಇಲ್ಲಿ ಎರಡೆರದು ಅಮ್ಮಂದಿರ ಪ್ರೀತಿ ಕಡೆಗೆ ಕಡೆಗಣಿಸುವ ತಂದೆಯ ಪ್ರೀತಿಯ ಪ್ರಾಮುಖ್ಯತೆ ಕೂಡ ಇದೆ ಎಂದು ಸುನೀಲ್ ಪುರಾಣಿಕ್ ಅವರು ಹೇಳಿದರು.
“ನನ್ನದು ಇಲ್ಲಿ ಮಲತಾಯಿಯ ಪಾತ್ರ. ಆದರೆ ಕೆಟ್ಟ ಮಲತಾಯಿಯಾಗಿ ಅಲ್ಲ. ನನಗೆ ಜೀವನ ಕೊಟ್ಟ ಮಗು ಎನ್ನುವ ಋುಣ ಇರುತ್ತದೆ” ಎನ್ನುವುದು ನಟಿ ಸ್ವಾತಿಯವರ ಮಾತು. ಈ ಹಿಂದೆ ಜೈ ಹನುಮಾನ್ ಧಾರಾವಾಹಿಯಲ್ಲಿ ನಟಿಸಿದ್ದ ಪ್ರಿಯಾಂಕ ಚಿಂಚೋಳಿ ಇಲ್ಲಿ ತಂದೆಯ ಪ್ರೀತಿಗಾಗಿ ಹಂಬಲಿಸುವ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ನವನಟ ಸಾಗರ್ ನಾಯಕನಾಗಿ ಅಭಿನಯಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್, ನಟಿ ಸುನೇತ್ರ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಪಂಡಿತ್, ಯಮುನಾ ಶ್ರೀನಿಧಿ, ರಂಗನಟಿ ಜಯಲಕ್ಷ್ಮೀ ಮೊದಲಾದವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಮನಸಾರೆ ಇದೇ ಫೆಬ್ರವರಿ 24 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ನಿಮ್ಮೆದುರು ಬರಲಿದೆ.
Be the first to comment