ಡಬ್ಬಿಂಗ್ ಮುಗಿಸಿದ ಮನರೂಪ ಚಿತ್ರತಂಡ

ಸಿ.ಎಂ.ಸಿ.ಆರ್ ಮೂವೀಸ್ ನಿರ್ಮಾಣ ಮಾಡುತ್ತಿರುವ ಮನರೂಪ ಚಿತ್ರದ “ಎಲ್ಲಾ ಕಲಾವಿದರೂ ಡಬ್ಬಿಂಗ್ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶಬ್ಧ ವಿನ್ಯಾಸ ಮತ್ತು ಹಿನ್ನೆಲೆ ಸಂಗೀತ ನೀಡುವ ಕೆಲಸಗಳು ಭರದಿಂದ ಸಾಗಿವೆ. ಪಶ್ಚಿಮ ಘಟ್ಟದ ನೈಜ, ನಿಗೂಢ ಕಾಡಿನ ಶಬ್ಧವನ್ನು ಸೌಂಡ್ ಡಿಸೈನರ್ ನಾಗರಾಜ್ ಹುಲಿವಾನ್ ಅವರು ಸೆರೆಹಿಡಿದ್ದಾರೆ. ಸಂಗೀತದ ಜವಾಬ್ದಾರಿಯನ್ನು ಸರ್‍ವಣ ಅವರು ನಿಭಾಯಿಸುತ್ತಿದ್ದಾರೆ. ಗೋವಿಂದರಾಜ್ ಅವರ ಛಾಯಾಗ್ರಹಣ ,ಸೂರಿ ಮತ್ತು ಲೋಕಿ ಸಿನಿಮಾವನ್ನು ಸಂಕಲಿಸಿದ್ದಾರೆ,”.

ಕರಡಿಗುಹೆ ಹುಡುಕಿಕೊಂಡು ಹೊರಟಿರುವ ಐವರು ಸ್ನೇಹಿತರ ಧ್ವನಿ ಹೊಂದಿರುವ ಮೋಷನ್ ಪೋಸ್ಟರ್ ಮೂಲಕವೇ ಕುತೂಹಲ ಕೆರಳಿಸಿರುವ ಜಾ ಡ್ರಾಪಿಂಗ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮನರೂಪ, ತನ್ನ ಡಬ್ಬಿಂಗ್ ಕಾರ್ಯವನ್ನು ಮುಗಿಸಿದೆ. ಇದೀಗ ಚಿತ್ರತಂಡದಿಂದ ದೊರಕಿರುವ ಮತ್ತೊಂದು ಸಂಗತಿಯೆಂದರೆ, ಕಾಲೇಜು ಜೀವನದ ನಂತರದ ಹಲವು ವರ್ಷಗಳ ಮೇಲೆ ಬೇಟಿಯಾಗುವ ಸ್ನೇಹಿತರು ನಿಗೂಢ ಬಲೆಯಲ್ಲಿ ಸಿಲುಕುವ ಕತೆಯನ್ನು ಮನರೂಪ ಚಿತ್ರ ಹೊಂದಿದೆ. “ಮನರೂಪ ಹೊಸ ತಲೆಮಾರಿನ ಥ್ರಿಲ್ಲರ್. ಪ್ರೇಕ್ಷಕರು ಅವುಡುಗಚ್ಚಿ (Jaw-Dropping Thriller) ನೋಡುವಂತೆ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಸಂಯೋಜಿಸಲಾಗಿದೆ. ಈ ಕಾಲದ ಯುವ ಪೀಳಿಗೆಯ ಕತ್ತಲೆ ಪ್ರಪಂಚವನ್ನು ಮನರೂಪದಲ್ಲಿ ಸೆರೆಹಿಡಿಯಲಾಗಿದೆ. ಕಾಡಿನ ಅನನ್ಯತೆಯ ಬ್ಯಾಕ್‍ಡ್ರಾಪ್‍ನಲ್ಲಿ ಮನುಷ್ಯನ ರೂಪಗಳು ತೆರೆದುಕೊಳ್ಳಲಿವೆ. ನಿಯಂತ್ರಣಕ್ಕೆ ಸಿಗದಿರುವ ಮನಸಿನ ಓಟದ ಪರಿಯೇ ಮನರೂಪ ನಿನಿಮಾ,” ಎಂದು ತಮ್ಮ ಚೊಚ್ಚಲ ಸಿನಿಮಾ ಕುರಿತು ನಿರ್ದೇಶಕ ಕಿರಣ್ ಹೆಗಡೆ ಹೇಳಿದರು.

ಹೊಸ ತಲೆಮಾರಿನ ಯುವಕರ ಮನಸ್ಸನ್ನು ಕಲಕುವ ಸೆಲ್ಪ್ ಅಬ್ಸೆಷನ್ ಎಂಬ ಸಂಕೋಲೆ ಮನರೂಪ ಸಿನಿಮಾದಲ್ಲಿವೆ. ಕತೆ ತೆರೆದುಕೊಳ್ಳುತ್ತಾ ಹೋದಂತೆ ದುರ್ಗಮ ಕಣಿವೆ, ಇಳಿಜಾರು, ಪೊದೆಗಳು, ಬೆಟ್ಟದ ತುದಿಗಳು ಮತ್ತು ನದಿ ದಂಡೆಯಲ್ಲಿ ಕಾಡಿನ ನಿಗೂಢ ಲೋಕ ಅನಾವರಣಗೊಳ್ಳುತ್ತದೆ. ಪ್ರಕೃತಿಯನ್ನು ಅದರ ಅಸಂಖ್ಯ ನೋಟಗಳಲ್ಲಿ ಸೆರೆಹಿಡಿಯಲು ಸಿನಿಮಾ ಛಾಯಾಗ್ರಾಹಕನಿಗೆ ಹೇಳಿಮಾಡಿಸಿದ ತಾಣಗಳು ಮನರೂಪ ಚಿತ್ರದಲ್ಲಿವೆ.ಸಿ.ಎಂ.ಸಿ.ಆರ್ ಮೂವೀಸ್ ನಿರ್ಮಾಣ ಮಾಡುತ್ತಿರುವ ಮನರೂಪ ಚಿತ್ರದಲ್ಲಿ ಹೊಸ ಪ್ರತಿಭೆ ದಿಲೀಪ್ ಕುಮಾರ್, ಅನೂಷಾ ರಾವ್, ನಿಶಾ ಬಿ. ಆರ್, ಆರ್ಯನ್, ಶಿವಪ್ರಸಾದ್ ಮುಖ್ಯಭೂಮಿಕೆಯಲ್ಲಿದ್ದರೆ, ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್‍ಗೌಡ, ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋಧಾ ಹೊಸಕಟ್ಟಾ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಚಿತ್ರ ಸೆಪ್ಟಂಬರ್‍ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

This Article Has 2 Comments
  1. Pingback: 3surface

Leave a Reply

Your email address will not be published. Required fields are marked *

Translate »
error: Content is protected !!