ಮಲಯಾಳಂ ನಟ ಮಮ್ಮುಟ್ಟಿ 8 ತಿಂಗಳ ಬಳಿಕ ನಟನೆಗೆ ಮರಳಲು ರೆಡಿ ಆಗಿದ್ದಾರೆ.
ಮಹೇಶ್ ನಾರಾಯಣನ್ ಅವರ ಬಿಗ್ ಬಜೆಟ್ ಚಿತ್ರ ‘ಪ್ಯಾಟ್ರಿಯಾಟ್’ನಲ್ಲಿ ಮಮ್ಮುಟ್ಟಿ ಮತ್ತೆ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ ಆ್ಯಂಟೋ ಜೋಸೆಫ್ ತಮ್ಮ ಫೇಸ್‌ಬುಕ್ ಅಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ.
‘ನನ್ನ ಪ್ರೀತಿಯ ಮಮ್ಮುಟ್ಟಿ ಬರುತ್ತಿದ್ದಾರೆ. ಅವರು ಅ. 1ರಿಂದ ಮಹೇಶ್ ನಾರಾಯಣನ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ತೆಗೆದುಕೊಂಡಿದ್ದು ಒಂದು ಸಣ್ಣ ವಿರಾಮ. ಮಮ್ಮುಟ್ಟಿ ಹೈದರಾಬಾದ್ನಲ್ಲಿ ಶೂಟಿಂಗ್ಗೆ ಸೇರುತ್ತಾರೆ. ಪ್ರಾರ್ಥನೆಯಲ್ಲಿ ಸೇರಿಕೊಂಡು ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರಿಗೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಪ್ರೀತಿ’ ಎಂದು ಆಂಟೋ ಜೋಸೆಫ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಅನಾರೋಗ್ಯದ ಕಾರಣ ಮಮ್ಮುಟ್ಟಿ 8 ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡೂ ಇರಲಿಲ್ಲ. ಇದಕ್ಕೆ ಕೆಲವರು ಇದನ್ನು ಕ್ಯಾನ್ಸರ್ ಎಂದು ಹೇಳಿದ್ದರು. ಚೆನ್ನೈನಲ್ಲಿ ಟ್ರೀಟ್ಮೆಂಟ್ ಪಡೆದ ಮಮ್ಮುಟ್ಟಿ 8 ತಿಂಗಳ ಬಳಿಕ ನಟನೆಗೆ ಮರಳಲು ರೆಡಿ ಆಗಿದ್ದಾರೆ.
‘ಪ್ಯಾಟ್ರಿಯಾಟ್’ ಚಿತ್ರ ಮಮ್ಮುಟ್ಟಿ, ಮೋಹನ್ ಲಾಲ್, ಕುಂಚಾಕೊ ಬೋಬನ್, ಫಹಾದ್ ಫಾಸಿಲ್, ನಯನತಾರಾ ನಟಿಸಿರುವ ದೊಡ್ಡ ಬಜೆಟ್ ಚಿತ್ರವಾಗಿದೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ 16 ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹರಿಕೃಷ್ಣನ್ಸ್ ಚಿತ್ರದ ನಂತರ ಮಮ್ಮುಟ್ಟಿ, ಮೋಹನ್ ಲಾಲ್, ಕುಂಚಾಕೊ ಬೋಬನ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರವೂ ಇದಾಗಿದೆ.
—–





Be the first to comment