ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ದಿಲೀಪ್ ಶಂಕರ್ ಅವರ ಶವ ಭಾನುವಾರ ತಿರುವನಂತಪುರಂನ ಹೋಟೆಲ್ ಕೊಠಡಿ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಟನ ಸಾವಿಗೆ ಕಾರಣ ಏನು ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ. ಈ ಸುದ್ದಿ ಕೇಳಿ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. ಮಾಹಿತಿಯ ಪ್ರಕಾರ ದಿಲೀಪ್ ಅವರು ಡಿ. 19 ರಂದು ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ್ದರು. ಆದರೆ ನಟ ಯಾವಾಗ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ.
ಟಿವಿ ಸೀರಿಸ್‌ನ ಶೂಟಿಂಗ್‌ಗಾಗಿ ಹೋಟೆಲ್‌ನಲ್ಲಿ ಬಂದು ಚೆಕ್‌ಇನ್ ಮಾಡಿದ್ದ ದಿಲೀಪ್ ಅವರು ಹೋಟೆಲ್‌ಗೆ ಬಂದ ದಿನದಿಂದ ಒಂದು ದಿನವೂ ತಮ್ಮ ರೂಮ್ ಬಿಟ್ಟು ಹೊರಗೆ ಬಂದಿಲ್ಲ. ನಟನಿಗೆ ಅವರ ಸಹನಟರು ಸಾಕಷ್ಟು ಭಾರಿ ಫೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೂ , ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅನುಮಾನ ಬಂದು ರೂಮ್ ನ್ನು ಪರಿಶೀಲಿಸಿದಾಗ ನಟ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.
ಟಿವಿ ಶೋ ಒಂದಕ್ಕಾಗಿ ದಿಲೀಪ್ ಅವರು ತಿರುವನಂತರಪುರಂಗೆ ಬಂದಿದ್ದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಮಾಹಿತಿಯನ್ನು ನಿರ್ದೇಶಕರೊಬ್ಬರು ಪೋಲಿಸರಿಗೆ ನೀಡಿದ್ದಾರೆ. ಸಾವಿನ ಕುರಿತು ಪೋಲಿಸರು ತನಿಖೆ ಆರಂಭಿಸಿದ್ದು, ತನಿಖೆಯ ನಂತರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬರಲಿದೆ.
ದಿಲೀಪ್ ಶಂಕರ್ ಮಲಯಾಳಂನ ಹಲವಾರು ಪ್ರಸಿದ್ದ ದಾರವಾಹಿ ಹಾಗೂ ಟಿವಿ ಶೋಗಳಲ್ಲಿ ನಟಿಸಿದ್ದಾರೆ.
—-
Be the first to comment