ಗುರುಮೂರ್ತಿ ಸುನಾಮಿ ನಿರ್ದೇಶನ, ಆಕ್ಷನ್ ಕ್ವೀನ್ ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಚಿತ್ರ ‘ಮಾರಕಾಸ್ತ್ರ’ ಬಿಡುಗಡೆ ಒಂದು ವಾರ ಮುಂದೂಡಲ್ಪಟ್ಟಿದೆ.
ಕಾವೇರಿ ಹೋರಾಟ ಬೆಂಬಲಿಸಿ ಚಿತ್ರತಂಡ ಬಿಡುಗಡೆ ದಿನಾಂಕ ಮುಂದೂಡಿದ್ದು, ಚಿತ್ರ ಅಕ್ಟೋಬರ್ 13ಕ್ಕೆ ಬಿಡುಗಡೆ ಆಗಲಿದೆ.
ಈ ಹಿಂದೆ ಅಕ್ಟೋಬರ್ 6ರಂದು ಚಿತ್ರವನ್ನು ಬಿಡುಗಡೆ ಮಾಡುವ ಆಶಯ ತಂಡಕ್ಕಿತ್ತು. ಆದರೆ ನಾಡು ನುಡಿ ಹೋರಾಟದಲ್ಲಿ ಕೈ ಜೋಡಿಸಬೇಕು ಎಂಬ ಕಾರಣದಿಂದ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಒಂದು ವಾರ ಮುಂದಕ್ಕೆ ಹಾಕಿದೆ.
ಚಿತ್ರದಲ್ಲಿ ಹೊಸ ಪ್ರತಿಭೆ ಆರ್ಯ ಹಾಗೂ ಹರ್ಷಿಕಾ ಪೂಣಚ್ಚ ಅವರ ಪಾತ್ರದ ದೃಶ್ಯಗಳು ರೋಚಕವಾಗಿವೆ ಎಂದು ಚಿತ್ರತಂಡ ಹೇಳಿದೆ. ನೃತ್ಯ ನಿರ್ದೇಶಕ ಧನುಕುಮಾರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವುದು ವಿಶೇಷ ಆಗಿದೆ.
ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಮೈ ನವಿರೇಳಿಸುವ ಸಾಹಸ ದೃಶ್ಯಗಳಿವೆ. ಮಾಲಾಶ್ರೀ ಅವರ ಹೊಡೆದಾಟದ ದೃಶ್ಯಗಳು ಗಮನ ಸೆಳೆಯಲಿದೆ. ಈಗಾಗಲೇ ಚಿತ್ರದ ಹಿಂದಿ ರೈಟ್ಸ್ ಹೆಚ್ಚಿನ ಬೆಲೆಗೆ ಮಾರಾಟ ಆಗಿದೆ.
ಮಾಲಾಶ್ರೀ ಅವರನ್ನು ಮತ್ತೆ ತೆರೆಯ ಮೇಲೆ ಕಾಣಲು ಪ್ರೇಕ್ಷಕರು ಒಂದು ವಾರ ಹೆಚ್ಚು ಕಾಯಬೇಕಿದೆ.
____






Be the first to comment