ದರ್ಶನ್ ತೂಗುದೀಪ ಅವರ ಹೊಸ ಚಿತ್ರದ ಮುಹೂರ್ತ ಇಂದು ದೇವಸ್ಥಾನದಲ್ಲಿ ನೆರವೇರಿತು. ಮಾಲಾಶ್ರೀ ಅವರ ಮಗಳು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಡಿ ಬಾಸ್ ಗೆ ನಾಯಕಿ ಆಗಿ ನಟಿಸಲಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು.
ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್, 90ರ ದಶಕದಲ್ಲಿ ಚಿತ್ರರಂಗ ಆಳಿದ ಕನಸಿನ ರಾಣಿ ಮಾಲಾಶ್ರೀಯವರ ಮಗಳು ನಾಯಕಿ ಆಗುತ್ತಿರುವುದು ಈ ಚಿತ್ರದ ವಿಶೇಷ. ಈ ಚಿತ್ರದ ಮೂಲಕ ಮಾಲಾಶ್ರೀ ಮಗಳು ರಾಧನಾ ರಾಮ್ ಎಂದು ಪರಿಚಯ ಅಗಲಿದ್ದಾರೆ.
ಚಿತ್ರದ ಮುಹೂರ್ತದಲ್ಲಿ ಮಾತನಾಡಿದ ನಾಯಕ ದರ್ಶನ್, ಈ ಚಿತ್ರದ ಮೂಲಕ ರಾಬರ್ಟ್ ಚಿತ್ರತಂಡ ಮತ್ತೆ ಒಂದಾಗುತ್ತಿದೆ. ಚಿತ್ರದ ಶೀರ್ಷಿಕೆ ಸದ್ಯದಲ್ಲಿಯೇ ಬಹಿರಂಗಪಡಿಸುತ್ತೇವೆ. ಇದು ಹೊಸ ಬಗೆಯ ಕಥೆ ಹೊಂದಿರುತ್ತದೆ ಎಂದು ಹೇಳಿದರು.
ನಾಯಕಿ ರಾಧನ್ ರಾಮ್ ಅವರ ತಾಯಿ ಹಿರಿಯ ನಟಿ ಮಾಲಾಶ್ರೀ ಮಾತನಾಡಿ, ನನಗೆ ಕನ್ನಡಿಗರು ನೀಡಿದ ಪ್ರೀತಿ ಅಪಾರ. ನನಗೆ ನೀಡಿದ ಪ್ರೀತಿಯನ್ನು ಮಗಳಿಗೂ ಕೊಡಿ ಎಂದು ಕೇಳಿಕೊಂಡರು.
ಇದೇ ವೇಳೆ ದರ್ಶನ್ ಅಭಿಮಾನಿಗಳಿಗಾಗಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ಕ್ರಾಂತಿ ಚಿತ್ರದ ಹೊಸ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
__






Be the first to comment