ಚಿತ್ರ: ಮಾರಕಾಸ್ತ್ರ
ನಿರ್ದೇಶಕ: ಗುರುಮೂರ್ತಿ ಸುನಾಮಿ
ನಿರ್ಮಾಣ: ಕೋಮಲ ನಟರಾಜ್
ತಾರಾಗಣ: ಮಾಲಾಶ್ರೀ, ಹರ್ಷಿಕಾ ಪೂಣಚ್ಚ, ಆನಂದ್ ಆರ್ಯ ಇತರರು…
ರೇಟಿಂಗ್: 4
ಮಾಲಾಶ್ರೀ ಅಬ್ಬರದ ಜೊತೆಗೆ ಸಂಪೂರ್ಣ ಮನರಂಜನೆಯ ಪ್ಯಾಕೇಜ್ ಸಿನಿಮಾ ಆಗಿ ಮಾರಕಾಸ್ತ್ರ ತೆರೆಯ ಮೇಲೆ ಈ ವಾರದಿಂದ ವಿಜೃಂಭಣೆ ಮಾಡಿದೆ.
ಬಳ್ಳಾರಿಯ ಸುತ್ತಮುತ್ತಲ ಭೂಮಿ ನಿಧಿ ಸಂಗ್ರಹವನ್ನು ಕಬಳಿಸಲು ನಡೆಸುವ ಹುನ್ನಾರದಲ್ಲಿ ರಾಜಕೀಯ ವ್ಯಕ್ತಿಗಳ, ಅಧಿಕಾರಿಗಳ ಕೊಲೆಯಾಗುತ್ತದೆ. ಇಲ್ಲಿ ನಡೆಯುವ ನಿಗೂಢ ಕೊಲೆಗಳ ಪ್ರಕರಣವನ್ನು ತನಿಖೆ ನಡೆಸುವ ಅಧಿಕಾರಿಯಾಗಿ ಮಾಲಾಶ್ರೀ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಟಿವಿಯ ವರದಿಗಾರ್ತಿ ನಂದಿನಿ (ಹರ್ಷಿಕಾ ಪೂಣಚ್ಚ) ಹಾಗೂ ಬಡವರಿಗೆ ಆಶ್ರಮ ನಡೆಸುವ ಭರತ್ (ಆನಂದ್ ಆರ್ಯ) ಜೋಡಿ ಹಲವು ಕೆಟ್ಟ ಜನರ ಹಿಂದೆ ಬಿದ್ದು ತೊಂದರೆ ಎದುರು ಹಾಕಿಕೊಳ್ಳುವ ಘಟನೆ ನಡೆಯುತ್ತಿರುತ್ತವೆ. ಸಾಹಸ ದೃಶ್ಯಗಳ ವೈಭವದ ಜೊತೆಗೆ ತೀವ್ರ ಕುತೂಹಲ ಹುಟ್ಟಿಸುವಂತೆ ಕಥೆ ಸಾಗುತ್ತದೆ.
ಮಾಲಾಶ್ರೀ ನಟನೆ ಮತ್ತು ಸಾಹಸ ದೃಶ್ಯಗಳಲ್ಲಿ ಅಬ್ಬರಿಸುತ್ತಾರೆ. ಹಣ ಹೂಡಿದ ನಿರ್ಮಾಪಕರು ಪಾತ್ರದ ಜೊತೆಗೆ ಎರಡು ಹಾಡನ್ನು ಪಡೆದು ಮಿಂಚುವ ಯತ್ನ ಮಾಡಿದ್ದಾರೆ.
ಆನಂದ್ ಆರ್ಯ ಪುನೀತ್ ರಾಜ್ಕುಮಾರ್ ಅವರನ್ನು ಅನುಕರಿಸಲು ಪ್ರಯತ್ನ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಡೇನಿಯಲ್ ಪಾತ್ರ ನಿರ್ವಹಿಸಿರುವ ಉಗ್ರಂ ಮಂಜು ಸಿಕ್ಕಿರುವ ಅವಕಾಶದಲ್ಲಿ ತಮ್ಮ ಪ್ರತಿಭಾ ಸಾಮರ್ಥ್ಯ ತೋರಿದ್ದಾರೆ.
ಛಾಯಾಗ್ರಾಹಕ ಅರುಣ್ ಸುರೇಶ್ ಹಲವು ಕಡೆ ದೃಶ್ಯಗಳನ್ನು ಸುಂದರವಾಗಿಸಿದ್ದಾರೆ. ಸತೀಶ್ ಬಾಬು ಹಿನ್ನೆಲೆ ಸಂಗೀತ ಸೊಗಸಾಗಿದೆ. ಭರಪೂರ ಮನರಂಜನೆಯ ಪ್ಯಾಕೆಜ್ ರೀತಿ ಚಿತ್ರ ಮೂಡಿ ಬಂದಿದೆ.
_____


Be the first to comment