ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ ಬ್ಲಾಕ್ ಬಸ್ಟರ್ ರೊಮ್ಯಾಂಟಿಕ್ ಡ್ರಾಮಾ ‘ಮೈನೆ ಪ್ಯಾರ್ ಕಿಯಾ’ 35 ವರ್ಷಗಳ ನಂತರ ಥಿಯೇಟರ್ ಗಳಲ್ಲಿ ಮರು ಬಿಡುಗಡೆಯಾಗುತ್ತಿದೆ.
‘ಮೈನೆ ಪ್ಯಾರ್ ಕಿಯಾ’ ನಿರ್ಮಾಣದ ರಾಜಶ್ರೀ ಪ್ರೊಡಕ್ಷನ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಸುದ್ದಿಯನ್ನು ಪ್ರಕಟಿಸಿದೆ. ’23 ಆಗಸ್ಟ್, 2024 ರಂದು ‘ಮೈನೆ ಪ್ಯಾರ್ ಕಿಯಾ’ ಮರು-ಬಿಡುಗಡೆ ಮಾಡುವ ಸಮಯ ಬಂದಿದೆ ಎಂದು ತಿಳಿಸಿದೆ.
ರಾಜಶ್ರೀ ಪ್ರೊಡಕ್ಷನ್ಸ್ ನಿಂದ ಈ ಮಾಹಿತಿ ಘೋಷಣೆಯಾದ ಕೂಡಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂರಜ್ ಬರ್ಜತ್ಯಾ ನಿರ್ದೇಶನದ ಈ ಚಿತ್ರವು ರೊಮ್ಯಾಂಟಿಕ್ ಪ್ರೇಮಕಥೆಯನ್ನು ಒಳಗೊಂಡಿದೆ. ಸಲ್ಮಾನ್ ಮತ್ತು ಭಾಗ್ಯಶ್ರೀ ಅವರಲ್ಲದೆ, ಚಿತ್ರದಲ್ಲಿ ಮೊಹ್ನಿಶ್ ಬಹ್ಲ್, ರೀಮಾ ಲಾಗೂ, ಅಲೋಕ್ ನಾಥ್, ಲಕ್ಷ್ಮೀಕಾಂತ್ ಬೆರ್ಡೆ ಮತ್ತು ಅಜಿತ್ ವಚಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
1989ರಲ್ಲಿ ಚಿತ್ರ ಬಿಡುಗಡೆಯಾದ ನಂತರ ಪ್ರೇಮ್(ಸಲ್ಮಾನ್) ಮತ್ತು ಸುಮನ್(ಭಾಗ್ಯಶ್ರೀ) ಪಾತ್ರಗಳು ಮನೆಮಾತಾದವು. ಈ ಪಾತ್ರಗಳು ಮತ್ತೆ ದೊಡ್ಡ ಪರದೆಯ ಮೇಲೆ ಪ್ರೇಕ್ಷಕರ ಹೃದಯವನ್ನು ಗೆಲ್ಲಲು ಬರುತ್ತಿವೆ. 35 ನೇ ವಾರ್ಷಿಕೋತ್ಸವದ ಅಂಗವಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಮರು-ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿದೆ.
Be the first to comment