ಮಹಿಷಾಸುರ ಚಿತ್ರದ ಹಾಡುಗಳು ಬಿಡುಗಡೆ ಮಾಡಿದ ಸಾಹಿತಿ ಹಾಗು ನಿರ್ದೇಶಕ ಕವಿರಾಜ್

ಹುಟ್ತಾನೇ ಯಾರೂ ಕೆಟ್ಟವರಾಗಿ ಜನಿಸುವುದಿಲ್ಲ, ನಮ್ಮ ಅಕ್ಕಪಕ್ಕದವರೇ ನಮ್ಮನ್ನು ಮಹಿಷಾಸುರ ಆಗುವ ಹಾಗೆ ಮಾಡುತ್ತಾರೆ. ಇಂದಿನ ರಾಜಕಾರಣಿಗಳು ತಮ್ಮ ವೋಟ್‍ಬ್ಯಾಂಕ್‍ಗೋಸ್ಕರ ಯುವ ಜನರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ಯುವ ನಿರ್ದೇಶಕ ಉದಯ ಪ್ರಸನ್ನ ಅವರು ತಮ್ಮ ಮಹಿಷಾಸುರ ಎಂಬ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಸಂಜಯ್ ಕುಲಕರ್ಣಿ, ವಿಜಯಕುಮಾರ್ ಸೇರಿದಂತೆ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಉದಯ ಪ್ರಸನ್ನ ಅವರು ತಮ್ಮ ಮೊದಲ ಪ್ರಯತ್ನವಾಗಿ ಮಹಿಷಾಸುರ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ತ್ರಿಕೋನ ಪ್ರೇಮಾಕಥಾ ಹಂದರವನ್ನು ಹೊಂದಿರುವ ಈ ಚಿತ್ರದ ಟ್ರೈಲರ್ ಸೋಮವಾರ ಡಿ ಬೀಟ್ಸ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಆಡಿಯೋವನ್ನು ಸಾಹಿತಿ ನಿರ್ದೇಶಕ ಕವಿರಾಜ್ ಅವರು ಬಿಡುಗಡೆಗೊಳಿಸಿದ್ದರು.

ಈ ಚಿತ್ರವನ್ನು ಜನವರಿ ಮೊದಲವಾರ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಮೇಲುಕೋಟೆ ಟೂರಿಂಗ್ ಟಾಕೀಸ್ ಮೂಲಕ ಶ್ರೀಮತಿ ಪಾರ್ವತಿ ಚಂದ್ರಶೇಖರ್, ಶ್ರೀಮತಿ ಲೀಲಾವತಿ ಸುರೇಶ್‍ಕುಮಾರ್ ಹಾಗೂ ಪ್ರೇಮಾ ಚಂದ್ರಯ್ಯ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ರಾಜ್ ಮಂಜು, ಸುದರ್ಶನ್ ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದು, ಬಿಂದುಶ್ರೀ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ನಿರ್ದೇಶನ ಮಾಡಬೇಕೆಂಬ ನನ್ನ ಬಹುದಿನಗಳ ಕನಸು ಈ ಚಿತ್ರದ ಮೂಲಕ ನನಸಾಗಿದೆ, ಮಹಿಷಾಸುರ ನನ್ನ ಮೊದಲಹೆಜ್ಜೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೇಳುವ ಪ್ರಯತ್ನವಾಗಿ ಈ ಚಿತ್ರ ಮಾಡಿದ್ದೇನೆ. ಮನುಷ್ಯ ಒಳ್ಳೆಯವನೇ ಆಗಿದ್ದರೂ ಆತ ತನ್ನ ತಾಳ್ಮೆ, ಸಹನೆ ಕಳೆದುಕೊಂಡಾಗ ಅಂತರಂಗದಲ್ಲಿರುವ ಅಸುರ ಮಹಿಷಾಸುರನ ರೂಪತಾಳುತ್ತಾನೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಯುವಕರಿಬ್ಬರು ಒಂದು ಹೆಣ್ಣಿಗೋಸ್ಕರ ಯಾವರೀತಿ ಅಸುರರೂಪ ತಾಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ, ನನ್ನ ತಾಯಿಯ ಊರಿನ ಹತ್ತಿರ ನಡೆದ ನೈಜಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡ ಈ ಚಿತ್ರದ ಕಥಾಹಂದರ ಹೆಣೆದಿದ್ದೇನೆ. ದೊಡ್ಡಬಳ್ಳಾಪುರದ ಬಳಿಯ ಮೇಲುಕೋಟೆ, ಮಂಡ್ಯ, ಮೈಸೂರು ರಾಮನಗರ ಸೇರಿದಂತೆ ಒಟ್ಟು 60 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದ್ದರು.

ನಾಯಕಿ ಬಿಂದುಶ್ರೀ ಈ ಚಿತ್ರದಲ್ಲಿ ಶ್ರೀಮಂತ ವ್ಯಕ್ತಿಯೊಬ್ಬನ ಮಗಳಾಗಿ ನಟಿಸಿದ್ದು, ಮುಗ್ದೆ, ಇಬ್ಬರು ಯವಕರ ಪ್ರೀತಿಯ ಸುಳಿಯಲ್ಲಿ ಸಿಕ್ಕು, ಸ್ನೇಹಿತರಾಗಿದ್ದ ಅವರು ವಿರೋಧಿಗಳಾಗಲು ಕಾರಣಳಾಗುತ್ತಾಳೆ. ಕೊನೆಗೆ ನಾಯಕಿ ಯಾರಿಗೆ ದಕ್ಕುತ್ತಾಳೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಸುನಿಲ್ ಕೌಶಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವೇಣು ಅವರ ಸಾಹಿತ್ಯವಿದ್ದು, ಕೃಷ್ಣ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.

Mahishasura Audio Release by #KaviRaj

 

Be the first to comment

Leave a Reply

Your email address will not be published. Required fields are marked *

Translate »
error: Content is protected !!