‘ಮಹಾವತಾರ ನರಸಿಂಹ’ ಚಿತ್ರ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು, ಹಿಂದಿ ಭಾಷೆಯೊಂದರಲ್ಲೇ 100 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ.
ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ ಗಳಿಕೆ 80 ಕೋಟಿ ರೂ. ದಾಟಿದೆ. ಚಿತ್ರ ಹಿಂದಿಯಲ್ಲಿ 2ನೇ ವಾರವೂ ಭರ್ಜರಿ ಗಳಿಕೆ ಮಾಡುತ್ತಿದ್ದು, ಮೊದಲ ವಾರಕ್ಕಿಂತ ಶೇ.57.28 ರಷ್ಟು ಹೆಚ್ಚು ಗಳಿಕೆ ಮಾಡಿದೆ. 2ನೇ ವಾರಾಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ 84.44 ಕೋಟಿ ರೂ. ಗೆ ಏರಿಕೆಯಾಗಿದೆ.
ಅಶ್ವಿನ್ ಕುಮಾರ್ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ‘ಮಹಾವತಾರ ನರಸಿಂಹ’ ಚಿತ್ರವನ್ನು ನಿರ್ಮಿಸಿದ್ದಾರೆ. ಯಾವುದೇ ಸ್ಟಾರ್ ಕಲಾವಿದರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದೆ.
ಮಹಾವತಾರ ನರಸಿಂಹ ಜುಲೈ 25 ರ0ದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಈಗಾಗಲೇ ಚಿತ್ರ ಜಾಗತಿಕವಾಗಿ 100 ಕೋಟಿ ರೂ. ಕ್ಲಬ್ ಸೇರಿದೆ.





Be the first to comment