ಕನ್ನಡದ ಮೊಟ್ಟ ಮೊದಲ ಆ್ಯನಿಮೇಟೆಡ್ ಚಿತ್ರ ‘ಮಹಾವತಾರ ನರಸಿಂಹ’ ಚಿತ್ರವನ್ನು ಆಸ್ಕರ್ ಪ್ರಶಸ್ತಿ ರೇಸ್ ಗೆ ಕಳುಹಿಸಲು ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ.
‘ಮಹಾವತಾರ ನರಸಿಂಹ’ ಚಿತ್ರ ಬಾಕ್ಸಾಫಿಸ್ ದಾಖಲೆಯ ಬಳಿಕ ಇದೀಗ ಮತ್ತೊಂದು ಮೈಲಿಗಲ್ಲಿನತ್ತ ಸಾಗಿದೆ. ಈಗಾಗಲೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಪ್ರಶಸ್ತಿ ಪರಿಗಣನೆಗೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ: ಅಧ್ಯಾಯ 1 ಚಿತ್ರವನ್ನು ಆಸ್ಕರ್ ಪರಿಗಣನೆಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್, ಅಶ್ವಿನ್ ಕುಮಾರ್ ನಿರ್ದೇಶಿಸಿದ ಮತ್ತು ಸ್ಟುಡಿಯೋ ಪ್ರಸ್ತುತಪಡಿಸಿದ 2D ಮತ್ತು 3D ಅನಿಮೇಟೆಡ್ ಚಿತ್ರ ಮಹಾವತಾರ್ ನರಸಿಂಹ ಚಿತ್ರವನ್ನು ಆಸ್ಕರ್ ಪ್ರಶಸ್ತಿ ಪರಿಗಣನೆಗೆ ಕಳುಹಿಸಲಾಗಿದೆ.
ಕ್ಲೀಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸಿದ ‘ಮಹಾವತಾರ ನರಸಿಂಹ’ ಚಿತ್ರ ವಿಶ್ವಾದ್ಯಂತ 300 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ. ಭಾರತದ ಅತಿ ಹೆಚ್ಚು ಗಳಿಕೆಯ ಅನಿಮೇಟೆಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಮಹಾವತಾರ ನರಸಿಂಹ’ ಜುಲೈ 25 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಹೊಂದಿತ್ತು. ನರಸಿಂಹಾವತಾರ ಮತ್ತು ಹಿರಣ್ಯಕಶಿಪು, ಮಹಾ ಭಕ್ತ ಪ್ರಹ್ಲಾದನ ಕಥೆಯನ್ನು ಈ ಚಿತ್ರ ತೆರೆದಿಡುತ್ತದೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿತ್ತು.
—-





Be the first to comment