ತಮ್ಮ ಮದುವೆಯ ಮೂಲಕ ಗಮನ ಸೆಳೆದಿದ್ದ ತಮಿಳು ಟಿವಿ ತಾರೆ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಚಂದರ್ ನಡುವಣ ವಿರಸದ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಸಿಂಗಲ್ ಫೋಟೋ ಹಾಕಿದ್ದ ರವಿಚಂದರ್ ದುಃಖದ ಬಗ್ಗೆ ಸಾಲುಗಳನ್ನ ಬರೆದಿದ್ದರು. ಇವರ ದಾಂಪತ್ಯದಲ್ಲಿ ಬಿರುಕು ಮೂಡಿತಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ ಬೆನ್ನಲ್ಲೇ ಮಹಾಲಕ್ಷ್ಮಿ ಅವರ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಹಾಲಕ್ಷ್ಮಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಫೋಟೋದಲ್ಲಿ ಮಹಾಲಕ್ಷ್ಮಿ ಮತ್ತು ರವಿಚಂದರ್ ಪರಸ್ಪರ ಆತ್ಮೀಯವಾಗಿ ಪೋಸ್ ನೀಡಿದ್ದಾರೆ.
“ನೀವು ನನ್ನನ್ನು ನಿಮ್ಮ ತೋಳುಗಳಿಂದ ಆವರಿಸಿಕೊಂಡಾಗ, ಈ ಜಗತ್ತಿನಲ್ಲಿ ನಾನು ಮಾಡಲು ಸಾಧ್ಯವಾಗದ ಯಾವುದೂ ಇಲ್ಲ ಎಂದು ನೀವು ನನಗೆ ತಿಳಿಸುತ್ತೀರಿ. ನಾನು ನಿಮ್ಮನ್ನು ನನ್ನ ಹೃದಯ ಮತ್ತು ಆತ್ಮದಿಂದ ಪ್ರೀತಿಸುತ್ತೇನೆ ಅಮ್ಮು” ಎಂದು ಮಹಾಲಕ್ಷ್ಮಿ ಬರೆದಿದ್ದಾರೆ.
ಇಬ್ಬರ ನಡುವೆ ವಿರಸ ಮೂಡಿದೆಯೇ ಎನ್ನುವ ವದಂತಿ ಹುಟ್ಟಿದ ಬೆನ್ನಲ್ಲೇ ಮಹಾಲಕ್ಷ್ಮಿ ಹಾಕಿರುವ ಫೋಟೋ ವದಂತಿಗಳಿಗೆ ಉತ್ತರ ನೀಡುವ ಯತ್ನ ಮಾಡಿದೆ.
___
Be the first to comment