ಡಿಸೆಂಬರ್ 26ಕ್ಕೆ ‘ಮೆಜೆಸ್ಟಿಕ್-2’ ತೆರೆಗೆ

ರೌಡಿಸಂ ಕುರಿತಾದ ಕಥೆ ಹೇಳುವ ‘ಮೆಜೆಸ್ಟಿಕ್-2’ ಡಿಸೆಂಬರ್‌ 26ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

ಮೆಜೆಸ್ಟಿಕ್‌ನ ಅಕ್ರಮ ಚಟುವಟಿಕೆ ಕುರಿತಾದ ಕಥೆ ಹೇಳುವ ‘ಮೆಜೆಸ್ಟಿಕ್-2’ ಚಿತ್ರದ ಮೋಷನ್ ಪೋಸ್ಟರ್‌ ಬಿಡುಗಡೆಗೊಂಡಿದೆ. ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ ಚಿತ್ರಕ್ಕೆ ಕಥೆ ಬರೆದಿದ್ದ ರಾಮು ನಿರ್ದೇಶಿಸಿರುವ ಈ ಚಿತ್ರವನ್ನು ಹೆಚ್.ಆನಂದಪ್ಪ ನಿರ್ಮಿಸಿದ್ದಾರೆ.

‘ಬೆಂಗಳೂರು ಸುತ್ತಮುತ್ತ ನಿರಂತರವಾಗಿ 126 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಮಾರ್ಚ್ 31ಕ್ಕೆ ನಮ್ಮ ಚಿತ್ರದ ಶೂಟಿಂಗ್ ಆರಂಭಿಸಿದ್ದೇವೆ. ಚಿತ್ರದುರ್ಗದ ಮುರುಘಾಮಠದಲ್ಲಿ ಡ್ಯುಯೆಟ್ ಸಾಂಗ್‌ ಚಿತ್ರೀಕರಣ ನಡೆಸಲಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪ್ರಾರಂಭಗೊಂಡಿದೆ. ಡಿಸೆಂಬರ್ 26ಕ್ಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ’ ಎಂದು ನಿರ್ದೇಶಕ ರಾಮು ಮಾಹಿತಿ ನೀಡಿದ್ದಾರೆ.

‘ಮೆಜೆಸ್ಟಿಕ್-2’ ಚಿತ್ರದಲ್ಲಿ ಯುವನಟ ಭರತ್‌ಗೆ ಸಂಹಿತಾ ವಿನ್ಯಾ ಜೋಡಿಯಾಗಿದ್ದಾರೆ. ಶ್ರುತಿ ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಲಾಶ್ರೀ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ವಿನು ಮನಸು ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ‘ಮೆಜೆಸ್ಟಿಕ್-2’ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!