ಸೆಟ್ಟೇರುತ್ತಿದೆ ‘ಮೆಜೆಸ್ಟಿಕ್ 2’

22 ವರ್ಷದ ಬಳಿಕ ಸೂಪರ್ ಹಿಟ್ ಚಿತ್ರ ‘ಮೆಜೆಸ್ಟಿಕ್2’  ಮತ್ತೆ ಸೆಟ್ಟೇರುತ್ತಿದೆ.

‘ಮೆಜೆಸ್ಟಿಕ್‌’ ಚಿತ್ರದ ಕಥೆಯಲ್ಲಿ ಕೆಲಸ ಮಾಡಿದ್ದ ರಾಮು ‘ಮೆಜೆಸ್ಟಿಕ್ 2’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರ 2003ರಲ್ಲಿ ತೆರೆ ಕಂಡಿದ್ದು, ಸೂಪರ್ ಹಿಟ್ ಚಿತ್ರವಾಗಿ ಹೊರ ಹೊಮ್ಮಿತ್ತು.

ಚಿತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿಲ್ಲ. ನಿರ್ಮಾಪಕ, ವಿತರಕ ಶಿಲ್ಪಾ ಅವರ ಪುತ್ರ ಭರತ್ ನಾಯಕ್ ಅವರನ್ನು ಮೆಜೆಸ್ಟಿಕ್ 2 ಚಿತ್ರದ ನಟನಾಗಿ ಚಿತ್ರ ಪರಿಚಯಿಸುತ್ತಿದೆ.

ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಟಿ.ಆನಂದಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ಟೈಟಲ್ ಅನಾವರಣ ಗೊಂಡಿದೆ.

”ಮೆಜೆಸ್ಟಿಕ್ ಸ್ಕ್ರಿಪ್ಟ್ ನಾನೇ ಬರೆದಿದ್ದೆ. ಸಿನಿಮಾದಲ್ಲಿ ನಾನು, ಪಿ.ಎನ್.ಸತ್ಯ ಮತ್ತು ಪ್ರೇಮ್ ಅವರ ಜೊತೆ ಕೆಲಸ ಮಾಡಿದ್ದೆ. ಸತ್ಯ ಅವರ ಜೊತೆ ಮನಸ್ತಾಪವಾಗಿ ನನ್ನನ್ನು ಬಿಟ್ಟು ಚಿತ್ರ ಮಾಡಿದರು. ಮೆಜೆಸ್ಟಿಕ್ ಸಿನಿಮಾ ನನ್ನ ಕನಸು. ಅದೀಗ ನನಸಾಗುತ್ತಿದೆ. ಮೆಜೆಸ್ಟಿಕ್2  ಚಿತ್ರದಲ್ಲಿ ಸಂಹಿತ ವಿನ್ಯಾ ನಾಯಕಿ, ವಿನು ಮನಸು ಸಂಗೀತ, ವಿನಸ್ ಮೂರ್ತಿ ಛಾಯಾಗ್ರಹಣ ಇರಲಿದೆ” ಎಂದು ನಿರ್ದೇಶಕ ರಾಮು ತಿಳಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!