ಮತ್ತೆ ‘ಮೆಜೆಸ್ಟಿಕ್ ‘ ರಿಲೀಸ್

ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ ಮೊದಲ ಸಿನಿಮಾ ಮೆಜೆಸ್ಟಿಕ್ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ನಿರ್ಮಾಪಕ ಎಂ ಜಿ ರಾಮಮೂರ್ತಿ ಸಿನಿಮಾ ಮರು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಕೆಲವೇ ದಿನ ಬಾಕಿ ಇದ್ದು, ಫೆ.16ರಂದು ‘ಮೆಜಿಸ್ಟಿಕ್’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

20 ವರ್ಷದ ಹಿಂದಿನ ಸಿನಿಮಾವನ್ನು ಮತ್ತೆ ಹೊಸದಾಗಿ ಕಲರಿಂಗ್ ಮಾಡಲಾಗಿದೆ. ಸೌಂಡ್ ಕರೆಕ್ಷನ್ ಮಾಡಲಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿ, ಸಿನಿಮಾವನ್ನು ದರ್ಶನ್ ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲು ನಿರ್ಮಾಪಕ ಎಂ ಜಿ ರಾಮಮೂರ್ತಿ ಮುಂದಾಗಿದ್ದಾರೆ.

ಚಿತ್ರ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎನ್ನುವುದು ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಶೇ 100 ಪ್ರಮಾಣದಲ್ಲಿ ಥಿಯೇಟರ್‌ಗಳು ಈಗಷ್ಟೇ ಓಪನ್ ಆಗಿವೆ. ಸಾಲು ಸಾಲು ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದೆಲ್ಲವನ್ನೂ ನೋಡಿಕೊಂಡು ಎಷ್ಟು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

20 ವರ್ಷದ ಹಿಂದೆ ಫೆ.8ರಂದು ರಿಲೀಸ್ ಆದ ” ಮೆಜೆಸ್ಟಿಕ್ ” ಚಿಕ್ಕ ಬಜೆಟ್ ಸಿನಿಮಾ ಆಗಿದ್ದರೂ ದರ್ಶನ್ ಹೆಸರಿನ ಸ್ಟಾರ್ ಕನ್ನಡ ಚಿತ್ರರಂಗದಲ್ಲಿ ಉದಯಿಸಲು ಕಾರಣ ಆಗಿತ್ತು. ಈ ಚಿತ್ರ ದರ್ಶನ್ ಅವರು ನಾಯಕ ನಟ ಆಗಲು ಪಟ್ಟ ಹಲವು ವರ್ಷದ ಶ್ರಮಕ್ಕೆ ಪ್ರತಿಫಲ ನೀಡಿತ್ತು. ಚಿತ್ರ 100 ದಿನ ಓಡುವ ಮೂಲಕ ದಾಖಲೆ ಬರೆಯಿತು. ಪಿ.ಎನ್‌. ಸತ್ಯ ಮೆಜೆಸ್ಟಿಕ್ ಸಿನಿಮಾವನ್ನು ನಿರ್ದೇಶಿಸಿದ್ದರು. ಎಂ.ಜಿ. ರಾಮಮೂರ್ತಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!