ನ.21 ರಂದು ‘ಮಫ್ತಿ ಪೊಲೀಸ್’ ರಿಲೀಸ್

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಐಶ್ವರ್ಯಾ ರಾಜೇಶ್  ನಟಿಸಿರುವ ‘ಮಫ್ತಿ ಪೊಲೀಸ್’ ಚಿತ್ರ ನವೆಂಬರ್ 21 ರಂದು ಬಿಡುಗಡೆಯಾಗಲಿದೆ.

ರಿಲೀಸ್ ಡೇಟ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಪೋಸ್ಟರ್ ನಲ್ಲಿ ಅರ್ಜುನ್ ಸರ್ಜಾ ಕೋಪದಲ್ಲಿರುವಂತೆ ಕಾಣಿಸುತ್ತದೆ. ‘ಮಫ್ತಿ ಪೊಲೀಸ್’ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ದಿನೇಶ್ ಲೆಚ್ಚುಮನನ್ ಚೊಚ್ಚಲ ನಿರ್ದೇಶನದಲ್ಲಿ  ಜಿ.ಎಸ್. ಆರ್ಟ್ಸ್ ಬ್ಯಾನರ್ ನಲ್ಲಿ ಜಿ. ಅರುಲ್ ಕುಮಾರ್  ಈ ಚಿತ್ರ ನಿರ್ಮಿಸಿದ್ದಾರೆ.

ಅರ್ಜುನ್ ಸರ್ಜಾ ಅವರ ಕಮ್ ಬ್ಯಾಂಕ್ ಮತ್ತು ಐಶ್ವರ್ಯಾ ರಾಜೇಶ್ ಅವರ  ಅಭಿನಯ ‘ಮಫ್ತಿ ಪೊಲೀಸ್’ ನ  ಹೈಲೈಟ್‌ಗಳಾಗುವ ನಿರೀಕ್ಷೆಯಿದೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಭಿರಾಮಿ ರಾಮ್‌ಕುಮಾರ್, ಜಿ.ಕೆ. ರೆಡ್ಡಿ ಮತ್ತಿತರರು ನಟಿಸಿದ್ದಾರೆ.

ಚಿತ್ರಕ್ಕೆ  ಶರವಣನ್ ಅಭಿಮನ್ಯು ಛಾಯಾಗ್ರಹಣ , ಆಶಿವಗನ್ ಸಂಗೀತ ಸಂಯೋಜಿಸಿದ್ದಾರೆ. ಲಾರೆನ್ಸ್ ಕಿಶೋರ್ ಅವರ ಸಂಕಲನವಿದೆ.

ಈ ಹಿಂದೆಯೇ ಬಿಡುಗಡೆಯಾದ ಟೀಸರ್ ನ ಆಕರ್ಷಕ ದೃಶ್ಯಗಳು ಮತ್ತು ಭಾವನಾತ್ಮಕ ಅಂಶಗಳು ಜನರಲ್ಲಿ ಸಿನಿಮಾ ಬಗ್ಗೆ ಆಸಕ್ತಿ ಮೂಡಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!