ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಮಾಫಿಯಾ ಚಿತ್ರ ಜನವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಮಮ್ಮಿ ಖ್ಯಾತಿಯ ಲೋಹಿತ್ ಎಚ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು /ಎ ಪ್ರಮಾಣ ಪತ್ರ ನೀಡಿದೆ. ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ ಆಗಿ ನಟಿಸಿದ್ದಾರೆ.
ಬೆಂಗಳೂರು ಕುಮಾರ್ ಫಿಲಂಸ್ ಮೂಲಕ ಕುಮಾರ್ ಬಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದ್ದೂರಿ ಪ್ರಚಾರದೊಂದಿಗೆ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಕುಮಾರ್ ಬಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಮೆಡಿಕಲ್ ಮಾಫಿಯಾದ ಸುತ್ತ ನಡೆಯುವ ಕಥೆಯನ್ನು ಸಿನಿಮಾ ಹೊಂದಿದೆ. ಆಕ್ಷನ್ ಥ್ರಿಲ್ಲರ್ ಕಥಾ ಹೊಂದಿರುವ ಚಿತ್ರವನ್ನು ಬೆಂಗಳೂರು ಅಲ್ಲದೆ ಮೈಸೂರು ಹಾಗೂ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮಾಡಲಾಗಿದೆ.
ಈ ಚಿತ್ರದ ತುಂಬಾನೇ ಕೇಳಲಾರೆ ಹಿಂದೆ ಬಿದ್ದು…ಹಾಡು ಸಂಗೀತ ಪ್ರಿಯರ ಮನ ಗೆದ್ದಿದೆ. ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು ಅನೂಪ್ ಸೀಳನ್ ಅವರ ಸಂಗೀತ ಸಂಯೋಜನೆ ಇದೆ.
ಚಿತ್ರದಲ್ಲಿ ದೇವರಾಜ್, ಸಾಧು ಕೋಕಿಲ, ಶೈನ್ ಶೆಟ್ಟಿ, ವಾಸುಕಿ ವೈಭವ್, ವಿಜಯ್ ಚೆಂಡು ಇತರರು ನಟಿಸಿದ್ದಾರೆ. ಪಾಂಡಿ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
Be the first to comment