‘ಮರಿ ಟೈಗರ್’ ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರದ ಮೊದಲ ಹಾಡು ಜೂನ್ 2ರಂದು ಯೂಟ್ಯೂಬಲ್ಲಿ ಬಿಡುಗಡೆಯಾಗುತ್ತಿದೆ.
ಈ ಕುರಿತಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ನವೀನ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಾಲ್ ಮಂಟೇರಾ ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ, ಶೃತಿ, ಮಾಲಾಶ್ರೀ, ಕಾಕ್ರೋಚ್ ಸುದೀ, ಮೈಕೋ ನಾಗರಾಜ್, ಚೈತ್ರ, ಬಾಲರಾಜ್ವಾಡಿ ಮತ್ತು ಮುನಿರಾಜ್ ಪಾತ್ರ ವರ್ಗದಲ್ಲಿದ್ದಾರೆ.
ರಾಧಾಕೃಷ್ಣ ಪಿಚ್ಚರ್ಸ್ ಲಾಂಛನದಲ್ಲಿ ಆರ್ ಕೇಶವ ನಿರ್ಮಾಣ ಮಾಡಿದ್ದಾರೆ. ವಿಜಯ್ ಕುಮಾರ್ ಸಂಕಲನ, ಬಾಲಕೃಷ್ಣ ತೋಟ ಛಾಯಾಗ್ರಹಣವಿದ್ದು, ಸತೀಶ್, ವಿಕ್ರಂ, ಥ್ರಿಲ್ಲರ್ ಮಂಜು ಮತ್ತು ಡಿಫ್ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ.
—–
Post Views:
145
Be the first to comment