ಲೈಂಗಿಕ ದೌರ್ಜನ್ಯ: ಮಡೆನೂರು ಮನು ಪೊಲೀಸ್ ಕಸ್ಟಡಿಗೆ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಡೆನೂರು ಮನುವನ್ನು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಮನುವನ್ನು ಬಂಧಿಸಿ  ಅನ್ನಪೂರ್ಣೇಶ್ವರಿ ನಗರ ಪೊಲೀಸರು  ಕೋರ್ಟ್‌ಗೆ ಹಾಜರುಪಡಿಸಿದ್ದರು. ಬೆಂಗಳೂರಿನ 6ನೇ ACJM ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿಯನ್ನು ಮೇ 27ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.  ಪೊಲೀಸರು FIRನಲ್ಲಿ ದಾಖಲಾದ ಆರೋಪಗಳ ಬಗ್ಗೆ  ವಿಚಾರಣೆ ನಡೆಸಲಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆ ಬಳಿಕ ಮಾತನಾಡಿರುವ ಸಂತ್ರಸ್ತೆ, ಮನು ನನಗೆ ಸಾಕಷ್ಟು ಬ್ಲಾಕ್ ಮೇಲ್ ಮಾಡಿದ್ದಾನೆ. ಕುಡಿಸಿ ಸಾಕಷ್ಟು ಆಡಿಯೋ ವಿಡಿಯೋ ಮಾಡಿದ್ದಾನೆ.  ವೈರಲ್ ಆಗಿರುವ ಆಡಿಯೋ, ವಿಡಿಯೋಗಳನ್ನ ಬಲವಂತವಾಗಿ ಮನುನೇ ಮಾಡಿಸಿದ್ದು. ಶನಿವಾರ ಕ್ರೂರವಾಗಿ ನಡ್ಕೊಂಡಿದ್ದಕ್ಕೆ ನಾನು ಕಂಪ್ಲೆಂಟ್ ಕೊಟ್ಟಿದೀನಿ. ಸಿನಿಮಾ ವಿಚಾರಕ್ಕೂ ದೂರಿಗೂ ಸಂಬಂಧ ಇಲ್ಲ. ಸಿನಿಮಾ ಟೀಂನವರು ದೂರು ಕೊಡದಂತೆ ಮನವಿ ಮಾಡ್ಕೊಂಡ್ರು. ಆದ್ರೆ ಮನು ನನಗೆ ಕೊಟ್ಟಿರುವ ಹಿಂಸೆಯಿಂದ ನಾನು ದೂರು ಕೊಟ್ಟೆ ಎಂದು ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಾಮಿಡಿ ಕಿಲಾಡಿಗಳು ಮಡೆನೂರು ಮನು ನಿನ್ನೆ ಅಂದರ್‌ ಆಗಿದ್ದು, ತನ್ನ ಸಿನಿಮಾ ರಿಲೀಸ್‌ ಸೆಲೆಬ್ರೆಷನ್‌ ಖುಷಿಯಲ್ಲಿರಬೇಕಿದ್ದ ನಟನಿಗೆ  ಸಂಕಷ್ಟ ಎದುರಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!