‘ಮೇಡ್ ಇನ್ ಚೈನಾ’ ಹೆಸರಿನ ಕನ್ನಡದ ಮೊದಲ ವರ್ಚುವಲ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ವಿಡಿಯೋ ಕಾಲ್ಗಳ ಮೂಲಕವೇ ಒಂದು ಸಿನಿಮಾದ ಕಥೆ ಹೇಳಲು ಇಲ್ಲಿ ಯತ್ನಿಸಲಾಗಿದೆ. ಈ ರೀತಿ ಮಲಯಾಳಂನಲ್ಲಿ ‘ಸಿ ಯು ಸೂನ್’ ಎನ್ನುವ ಸಿನಿಮಾ ಮಾಡಲಾಗಿತ್ತು. ‘ಇಕ್ಕಟ್’ ಸಿನಿಮಾದಲ್ಲಿ ನಟಿಸಿದ್ದ ನಾಗಭೂಷಣ್ ‘ಮೇಡ್ ಇನ್ ಚೈನಾ’ ಸಿನಿಮಾದಲ್ಲಿ ನಟಿಸಿದ್ದಾರೆ.
‘ಅಯೋಗ್ಯ’, ‘ರತ್ನಮಂಜರಿ’ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದ ಪ್ರೀತಮ್ ತೆಗ್ಗಿನಮನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗ್ರಾಫಿಕ್ಸ್, ಎಡಿಟಿಂಗ್ ಹಾಗೂ ಛಾಯಾಗ್ರಹಣ ಸಹ ಇವರೇ ಮಾಡಿದ್ದಾರೆ. ಕಡಿಮೆ ಬಜೆಟ್ನಲ್ಲಿ ಚಿತ್ರ ತಯಾರಾಗಿದೆ.
ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ಚಿತ್ರದಲ್ಲಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಗಂಡ ವಿದೇಶದಲ್ಲಿ ಲಾಕ್ ಆದಾಗ, ದಂಪತಿಗಳ ನಡುವೆ ನಡೆಯುವ ಪ್ರೀತಿ, ಪ್ರೇಮ ಎಲ್ಲವನ್ನೂ ವಿಡಿಯೋ ಕಾಲ್ ಮೂಲಕ ಸಿನಿಮಾದಲ್ಲಿ ತೋರಿಸಲಾಗಿದೆ.
ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಕಥೆ ಬರೆದಿದ್ದಾರೆ. ವೀವಾನ್ ರಾಧಾಕೃಷ್ಣ ಸಂಗೀತ ನೀಡಿದ್ದಾರೆ.
__
Be the first to comment