ಪ್ರದೀಪ್ ಶಾಸ್ತ್ರಿ ನಿರ್ದೇಶನದ ಮೇಡ್ ಇನ್ ಬೆಂಗಳೂರು ಸಿನಿಮಾ ಜೂನ್ ತಿಂಗಳಲ್ಲಿ ರಿಲೀಸ್ ಆಗಲಿದೆ.
ಚಿತ್ರದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ ಜೊತೆ ಮಧುಸೂದನ್, ಗೋವಿಂದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
“ಮೇಡ್ ಇನ್ ಬೆಂಗಳೂರು, ಬೆಂಗಳೂರು ನಗರದ ಕುರಿತ ಕಥೆಯಾಗಿದೆ. ಬೆಂಗಳೂರಿಗೆ ಬಂದಿರುವ ಎಲ್ಲಾ ಹೊರಗಿನವರು ಎರಡನೇ ಮಾತಿಲ್ಲದೇ ಸಿಲಿಕಾನ್ ಸಿಟಿಯನ್ನು ತಮ್ಮ ರಾಜಧಾನಿ ಎಂದು ಭಾವಿಸಿದ್ದಾರೆ. ಬೆಂಗಳೂರಿನ ಸಾಹಸೋದ್ಯಮ, ಬಂಡವಾಳಶಾಹಿಗಳು, ದರೋಡೆಕೋರರು, ಕ್ರಿಕೆಟ್ ಪ್ರೇಮಿಗಳು, ಕಂಪನಿಯ ಸ್ಥಾಪಕರು, ವೈಫಲ್ಯದಿಂದ ನಿರಾಶೆಗೊಂಡವರ ಪಾತ್ರಗಳನ್ನು ಸಿನಿಮಾದಲ್ಲಿ ತರಲಾಗಿದೆ. ಜೀವನ ಪಾಠಗಳು, ಬದುಕಿನ ಸ್ಪೂರ್ತಿ ಸೇರಿದಂತೆ ಹಲವು ವಿಷಯಗಳು ನಮ್ಮ ಸಿನಿಮಾದಲ್ಲಿವೆ” ಎಂದು ಪ್ರದೀಪ್ ಶಾಸ್ತ್ರಿ ತಿಳಿಸಿದ್ದಾರೆ.
“ಶತಮಾನಗಳ ಸಂಸ್ಕೃತಿಗಳ ಸಮ್ಮಿಶ್ರಣವಾಗಿರುವ ಈ ನೆಲದಲ್ಲಿ ತನ್ನದೇ ಭಾಷೆಯಲ್ಲಿ ಕಥೆ ನಿರೂಪಿಸುವ ಈ ಸಿನಿಮಾ ನಮ್ಮ ವಿನಮ್ರ ಪ್ರಯತ್ನವಾಗಿದೆ” ಎಂದು ಪ್ರದೀಪ್ ಶಾಸ್ತ್ರಿ ಅವರು ತಿಳಿಸಿದ್ದಾರೆ.
ಪುನೀತ್ ಮಂಜ, ವಂಶಿಧರ್, ಹಿಮಾಂಶಿ ವರ್ಮಾ, ಶಂಕರಮುತ್ತಿ ಮತ್ತು ಅನುರಾಗ್ ಉಟ್ಟಿಗೆ ಮೇಡ್ ಇನ್ ಬೆಂಗಳೂರು ಚಿತ್ರದಲ್ಲಿ ನಟಿಸಿದ್ದಾರೆ.
___

Be the first to comment