ಇಂಟ್ರೊಡಕ್ಷನ್ ಸಾಂಗ್ ರಿಲೀಸ್ ಮಾಡಿದ “ಮ್ಯಾಡಿ” ಚಿತ್ರತಂಡ

“ಮ್ಯಾಡಿ” ಚಿತ್ರತಂಡದ ಚಿತ್ರ ಸಂಸ್ಥೆಯ ಹೆಸರು , ಶೀರ್ಷಿಕೆ ಹಾಗೂ ನಾಯಕನ ಪರಿಚಯಿಸುವ ಪ್ರಮೋಷನಲ್ ಸಾಂಗ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು.

ಮಾಜಿ ಸಚಿವ ಹೆಚ್. ಎಂ. ರೇವಣ್ಣ ಅವರು ನೂತನ ಸಂಸ್ಥೆ ಮಹೇಶ್ಮತಿ ಬ್ಯಾನರ್ ಲೋಗೋ ಲಾಂಚ್ ಮಾಡಿದರು. ನಂತರ  ಮಾತನಾಡುತ್ತಾ, ”ಅಂದಿನ ಡ್ಯಾನ್ಸ್ ಹಾಗೂ ಇಂದಿನ ಡ್ಯಾನ್ಸ್ ಗೂ ತುಂಬಾ ವ್ಯತ್ಯಾಸವಿದೆ. ಹೀರೋ ತುಂಬಾ ಜೋಶ್ ಹಾಗೂ ಶ್ರಮಪಟ್ಟು ಸಾಂಗ್ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ. ಚಿತ್ರ ಯಶಸ್ವಿಯಾಗಿ ಮೂಡಿ ಬರಲಿ” ಎಂದು ಶುಭ ಕೋರಿದರು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೀರೋ ಫಸ್ಟ್ ಲುಕ್ ರಿವೀಲ್ ಮಾಡಿ, ”ಈ ಚಿತ್ರದ ಹೀರೋ ಅಂಡ್ ಟೀಮ್ ನನಗೆ ಬಹಳ ಆತ್ಮೀಯರು.  ಪ್ರಮೋಶನಲ್ ಸಾಂಗೇ ಇಷ್ಟು ಅದ್ಭುತವಾಗಿ ಮಾಡಿರುವುದು ಖುಷಿಕೊಟ್ಟಿದೆ. ನನಗೆ ಹಾಡು ಬಹಳ ಇಷ್ಟ ಆಯಿತು. ಅದರಲ್ಲೂ ಚಿತ್ರ ಸಾಹಿತಿ ಚೇತನ್ ಕುಮಾರ್ ಹಾಡಿರುವುದು ಮತ್ತೊಂದು ವಿಶೇಷ.  ಸಿನಿಮಾ ಶೋಕಿ ಅಲ್ಲ ಇಲ್ಲಿ ಬೆಳೆಯಬೇಕಾದರೆ ವಿದ್ಯೆಗಿಂತ ಬದುಕೋ ಕಲೆ ಮುಖ್ಯ.  ಯುವಕರ ತಂಡಕ್ಕೆ ಶುಭವಾಗಲಿ” ಎಂದರು.

ಚಿತ್ರಕ್ಕೆ ಪ್ರಮೋಶನಲ್ ಸಾಂಗ್ ಬರೆದು ಹಾಗೂ ಗಾಯಕರಾಗಿ ಹಾಡಿರುವ  ಚೇತನ್ ಕುಮಾರ್ ಮಾತನಾಡುತ್ತಾ, ” ನನಗೆ ಬರೆಯುವುದು ಅಂದರೆ ಇಷ್ಟ. ಈ ‘ಜೋರು ಜೋರು ಸಿಕ್ಕಾಪಟ್ಟೆ ಜೋರು’… ಎಂಬ ಹಾಡು ಆರು ವರ್ಷನ್ ಬದಲಾವಣೆ ನಂತರ  ಸುಂದರವಾಗಿ ಮೂಡಿ ಬಂದಿದೆ. ನಾನು ಟ್ರ್ಯಾಕ್ ಮಾತ್ರ ಹಾಡಿದ್ದೆ. ಅದನ್ನೇ ಈಗ ತಂಡ ಬಳಸಿಕೊಂಡು ಸಾಂಗ್ ಹೊರ ತಂದಿದೆ. ಈ ಸಾಂಗ್ ಗೆ ಹಾಕಿರುವ ಎಫರ್ಟ್ ಸ್ಕ್ರೀನ್ ಮೇಲೆ ಕಾಣುತ್ತೆ. ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಶುಭ ಕೋರಿದರು.

ಚಿತ್ರ ಸಾಹಿತಿ ಗೌಸ್ ಪೀರ್, ನಟ ಧರ್ಮಣ್ಣ , ನಿರ್ದೇಶಕ ಮದಗಜ ಮಹೇಶ್ ಸೇರಿದಂತೆ ಹಲವಾರು ಗಣ್ಯರು  ತಂಡಕ್ಕೆ ಶುಭ ಹಾರೈಸಿದರು. ಚಿತ್ರದ ನಾಯಕ ಧನುಷ್ ಕುಮಾರ್ (ಪಮ್ಮಿ), ನಿರ್ದೇಶಕ ನಾಗಭೂಷಣ್ ಎಸ್.ಆರ್., ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

”ಮ್ಯಾಡಿ” Nick Name Of Violence… ಎಂಬ ಅಡಿಬರವಿರುವ ಈ ಚಿತ್ರಕ್ಕೆ , ಅರ್ಜುನ್ ರಾಜ್ , ಚಂದ್ರು ಬಂಡೆ ಸಾಹಸ ಸಂಯೋಜನೆ , ಭಜರಂಗಿ ಮೋಹನ್ , ಗೋಕುಲ್ ಕೊರಿಯೋಗ್ರಾಫ್, ವಿಜಯ್ ಕುಮಾರ್ ಸಂಕಲನವಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!