ಚಂದನವನದಲ್ಲಿ ಪ್ರಸಕ್ತತಂತ್ರಜ್ಘರುಎರಡು ಮೂರು ಜವಬ್ದಾರಿಗಳನ್ನು ಚಿತ್ರದಲ್ಲಿ ತೆಗೆದುಕೊಳ್ಳುತ್ತಾರೆ.ಆ ಸಾಲಿಗೆ ರವಿ ಶತಬಿಷ ಸೇರಿಕೊಳ್ಳುತ್ತಾರೆ. ಇವರು ‘ಮದ್ದಾನೆ’ ಚಿತ್ರಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಂಕಲನ, ವಿಎಫ್‍ಎಕ್ಸ್, ಡಿಐ ಮತ್ತು ನಿರ್ದೇಶನ ಹೀಗೆ ಏಳು ವಿಭಾಗಗಳಲ್ಲಿ ಕುಶಲತೆಯನ್ನುತೋರಿಸುತ್ತಿದ್ದಾರೆ. ಹೀರೋಈಸ್ ನಾಟ್ ಎ ರೌಡಿಎಂದು ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿದೆ.ಮುಗ್ದ ಕಾಲೇಜು ಹುಡುಗನೊಬ್ಬಭೂಗತ ಲೋಕಕ್ಕೆ ಸೇರಿಕೊಂಡುಡಾನ್‍ಆಗುತ್ತಾನೆ. ಶೀರ್ಷಿಕೆಯಂತೆ ಯಾರಿಗೂಅಂಜದೆ, ತಾನು ನಡೆದಿದ್ದೆದಾರಿಅಂತ ತಿಳಿದಿರುತ್ತಾನೆ.
ಮುಂದಿನದನ್ನು ತಂಡವುಗೌಪ್ಯವಾಗಿಟ್ಟಿದೆ. ಬೆಂಗಳೂರು, ಮಂಗಳೂರು, ಪಾಂಡವಪುರ, ಹಾಸನ,ಮೈಸೂರು ಕಡೆಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಲುಯೋಜನೆ ಹಾಕಲಾಗಿದೆ.ಶಿವಕುಮಾರ್ ಸಾಹಿತ್ಯದ ಹಾಡುಗಳಿಗೆ ಕಾರ್ತಿಕ್‍ವೆಂಕಟೇಶ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಈ ಪೈಕಿ ತಾಯಿಕುರಿತಾದ ಹಾಡನ್ನು ಸೆಲಬ್ರಟಿಯಿಂದ ಹಾಡಿಸಲುಚಿಂತನೆ ನಡೆಸಲಾಗಿದೆ.ಭೂ ವಿಜ್ಘಾನದಲ್ಲಿ ಪಿ.ಹೆಚ್‍ಡಿ ಪಡೆದಿರುವಕಲ್ಲಿನಕೋಟೆಯಆರ್ಯ ನಾಯಕ. ಬಿಇ ವ್ಯಾಸಾಂಗ ಮಾಡುತ್ತಿರುವ ಬೆಂಗಳೂರಿನ ಹೇಮಿಷ ನಾಯಕಿ. ಇಬ್ಬರಿಗೂ ನಟನೆ ಹೊಸ ಅನುಭವ. ಖಳನಾಯಕನಾಗಿ ಅಲಂಕಾರ್‍ಚಂದ್ರು, ಉಳಿದಂತೆ ಡಾ.ರಾಘವೇಂದ್ರಮೋಕ್ಷಗುಂಡಂ ಇವರೊಂದಿಗೆ ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಛಾಯಾಗ್ರಹಣ ಮಂಜುನಾಥಹೆಗಡೆಅವರದಾಗಿದೆ. ಲತಾಮೂರ್ತಿ ಹಣ ಹೂಡುವಜೊತೆಗೆ ಸಣ್ಣದೊಂದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಶ್ರೀಮತಿ.ನದಿ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸನ್ನಗಣಪತಿದೇವಸ್ಥಾನದಲ್ಲಿ ನಡೆದಮಹೂರ್ತ ಸಮಾರಂಭಕ್ಕೆಹಾವೇರಿಯಅಕ್ಕಿಮಠದ ಶ್ರೀ.ಮ.ನಿ.ಪ್ರ.ಗುರುಲಿಂಗ ಸ್ವಾಮೀಜಿಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
Pingback: uk-replicawatches.co.uk