“ಮದಕರಿಪುರ” ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್

ತಾತಾ ಪ್ರೊಡಕ್ಷನ್ಸ್ 4ನೇ ಕಾಣಿಕೆ “ಮದಕರಿಪುರ” ಕಿಚ್ಚ ಮಾತಾಡ್ತಾನೆ. ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಹಾಡುಗಳೊಂದಿಗೆ ನಿರ್ಮಿಸಿ, ನಿರ್ದೇಶಿಸಿದ್ದಾರೆ.ಪಲ್ಲಕ್ಕಿ. ಛಾಯಾಗ್ರಹಣ-ರಾಜಾಶಿವಶಂಕರ್, ಸಂಗೀತ -ಸ್ಯಾಮ್, ಸಂಕಲನ –ಗೌತಮ್ ಪಲ್ಲಕ್ಕಿ, ಸಾಹಸ- ಡಿಫರೆಂಟ್ ಡ್ಯಾನಿ, ನೃತ್ಯ-ತ್ರಿಭುವನ್, ನಿರ್ವಹಣೆ-ನರಸಿಂಹ ಜಾಲಹಳ್ಳಿ, ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್ ಮಿಸ್ಟ್ರಿ ಕಥೆ ಮತ್ತು ನೈಜ ಘಟನೆಗಳನ್ನು ಆಧರಿಸಿ ಅಪ್ರಕಟಿತ ಕಾದಂಬರಿ ನಾಟಕ “ಗಿಡ್ಡೋಬಾ ಮಾತಾಡ್ತಾನೆ” ಆಧರಿಸಿ ಚಿತ್ರ ನಿರ್ಮಾಣವಾಗಿದೆ.
ಚಿತ್ರೀಕರಣ, ಬೆಂಗಳೂರು ಸುತ್ತಮುತ್ತ-ಹಿರಿಯೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ನಂದಿಗ್ರಾಮ, ಮತ್ತು ಕೈವಾರ ತಾತಯ್ಯ ಸ್ಟುಡಿಯೋವಿನಲ್ಲಿ ನಡೆದಿದೆ. ತಾರಾಗಣದಲ್ಲಿ – ಡಾ.ರಾಧಾಕೃಷ್ಣ ಪಲ್ಲಕ್ಕಿ, ಪ್ರಕಾಶ್ ಅರಸ್, ಎಂ.ಕೆ.ಮಠ, ಶ್ರೀನಿವಾಸ ಗುರೂಜಿ, ನೈಋತ್ಯ, ಸೀನೂ ಮಾರ್ಕಾಳಿ, ವಿನಯ್ ಬಲರಾಮ್, ಅರ್ಗವಿ ರಾಯ್, ರೆಡ್ಡಿ ಹಿರಿಯೂರ್, ಸವಿತಾ ಚಿನ್ಮಯಿ, ವೆಂಕಟಾಚಲ, ಹಾಗೂ ಪಲ್ಲಕ್ಕಿ ಫಿಲಂ ಇನ್ಟಿಟ್ಯೂಟ್ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!