ಮದಕರಿ ಚಿತ್ರದ ಶೂಟಿಂಗ್ ಗೆ ಕೋವಿಡ್ ಅಡ್ಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ ರಾಜವೀರ ಮದಕರಿ ನಾಯಕ ‘ ಚಿತ್ರದ ಚಿತ್ರೀಕರಣವನ್ನು ಕೋವಿಡ್ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದೆ.

ಕೇರಳದ ಕೊಚ್ಚಿಯಲ್ಲಿ ಈ ಚಿತ್ರದ ಚಿತ್ರೀಕರಣವನ್ನು 20 ದಿನಗಳ ಕಾಲ ನಡೆಸಲಾಗಿತ್ತು. ಆದರೆ ಈಗ ಕೇರಳದಲ್ಲಿ ಕೋವಿಡ್ ಹೆಚ್ಚಾಗಿರುವ ಕಾರಣ ಚಿತ್ರೀಕರಣ ಮಾಡಲು ಅನುಕೂಲ ವಾತಾವರಣ ಇಲ್ಲದೆ ಚಿತ್ರತಂಡದಿಂದ ಚಿತ್ರೀಕರಣ ಮುಂದೂಡಲಾಗಿದೆ.

ಈ ಚಿತ್ರ ಐತಿಹಾಸಿಕ ಆಗಿದ್ದು ಚಿತ್ರೀಕರಣ ವೇಳೆ ಕನಿಷ್ಠ 500 ಜನ ಭಾಗಿ ಆಗಬೇಕಾಗುತ್ತದೆ. ನೂರಾರು ಸೈನಿಕರು ರಾಜನ ಜೊತೆಗೆ ನಿತ್ಯ ಇರಬೇಕಾಗುತ್ತದೆ. ಇಷ್ಟೊಂದು ಜನರು ಚಿತ್ರೀಕರಣದಲ್ಲಿ ಭಾಗಿ ಆಗಲು ಸಾಧ್ಯ ಇಲ್ಲದ ಕಾರಣ ಚಿತ್ರೀಕರಣ ನಿಂತಿದೆ.

” ದೊಡ್ಡ ಮಟ್ಟದಲ್ಲಿ ಪ್ರೊಡಕ್ಷನ್ ತಂಡ ಇಟ್ಟುಕೊಂಡು ಚಿತ್ರೀಕರಣ ಮಾಡುವುದು ಅಪಾಯದ ಕೆಲಸ ಆಗಿದೆ. ಈ ಕಾರಣದಿಂದ ಚಿತ್ರೀಕರಣ ಮುಂದಕ್ಕೆ ಹಾಕಲಾಗಿದೆ” ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ದರ್ಶನ್ ನಟನೆಯ ರಾಜವೀರ ಮದಕರಿ ನಾಯಕ ‘ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!